ನ್ಯೂಸ್

ಕರೊನಾ ವಿಶೇಷ ಪ್ಯಾಕೇಜ್​ ಘೋಷಣೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

arunakunigal

ಬೆಂಗಳೂರು: ನಾವು ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡುವಂತೆ ಕೇಳಿದ್ದೆವು. ನೆಪಮಾತ್ರಕ್ಕೆ ಮಾಡಿದ್ದಾರಷ್ಟೆ. ಆದರೆ ಈ ಪ್ಯಾಕೇಜ್​ ಯಾವುದಕ್ಕೂ ಸಾಲುವುದಿಲ್ಲ. ಇದು ಬಡಜನರ ಪರವಾಗಿ ಇರುವ ಸರ್ಕಾರ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

ಕರೊನಾ ಲಾಕ್​ಡೌನ್​ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಬಡವರ್ಗದ ಜನರ ಅನುಕೂಲಕ್ಕಾಗಿ ಸಿಎಂ ಯಡಿಯೂರಪ್ಪ 1,250 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್​ ಘೋಷಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಈ ಪ್ಯಾಕೇಜ್​ನಲ್ಲಿ ಕೃಷಿಕರನ್ನು ಕಡೆಗಣಿಸಲಾಗಿದೆ. ರೈತರಿಗೆ ಯಾವುದೇ ಸಹಾಯಧನ ಕೊಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸರ್ವೇ ಕಾರ್ಯ ಆಗಬೇಕಿದೆ. ಪಡಿತರ ವಿತರಣೆ ಬಗ್ಗೆಯೂ ಗೊಂದಲ ಇದೆ. ಕರೊನಾ ವಾರಿಯರ್ಸ್ ಆಗಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಕಿಡಿಕಾರಿದರು. ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ ಕೊಡುತ್ತಿದ್ದಾರೆ. ಇದಕ್ಕೂ ಆಧಾರ್​ ಕಾರ್ಡ್​ ತರಬೇಕು ಅಂತಿದ್ದಾರೆ ಎಂದು ಡಿಕೆಶಿ ಟೀಕಿಸಿದರು.