ನ್ಯೂಸ್

ಮತ ಎಣಿಕೆ ಮುನ್ನಾ ದಿನವೇ ನಗರಸಭೆ ಚುನಾವಣಾ ಅಭ್ಯರ್ಥಿ ಕರೊನಾಗೆ ಬಲಿ!

ರಾಮನಗರ: ಕೋವಿಡ್​ಗೆ ನಗರಸಭೆ ಚುನಾವಣಾ ಅಭ್ಯರ್ಥಿ ಲೀಲಾ ಗೋವಿಂದರಾಜ್(42) ಕೋವಿಡ್​ಗೆ ಬಲಿಯಾಗಿದ್ದಾರೆ.

ರಾಮನಗರ ನಗರಸಭೆಯ 4ನೇ ವಾರ್ಡ್​ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೀಲಾ ಗೋವಿಂದರಾಜು ಸ್ಪರ್ಧಿಸಿದ್ದರು. ಏ.27ರಂದು ಮತದಾನ ನಡೆದಿತ್ತು. ನಾಳೆ(ಏ.30) ಮತ ಏಣಿಕೆ ನಡೆಯಲಿದೆ.

ಈ ನಡುವೆ ಲೀಲಾಗೆ ಕರೊನಾ ಸೋಂಕು ತಗುಲಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ನಗರಸಭೆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಅಭ್ಯರ್ಥಿ ಮೃತಪಟ್ಟ ಸುದ್ದಿ ಕೇಳಿ ಅವರ ಬೆಂಬಲಿಗರು ಸೇರಿದಂತೆ ಕುಟುಂಬಸ್ಥರು ದುಃಖಿತರಾಗಿದ್ದಾರೆ.