ನ್ಯೂಸ್

VIDEO| ಕರೊನಾ​ ಮಣಿಸಲು ಪೊಲೀಸರ ಮಸ್ತ್​ ಡಾನ್ಸ್​! ವಿಡಿಯೋ ವೈರಲ್

ತಿರುವನಂತಪುರಂ: ಮಹಾಮಾರಿ ಕರೊನಾಗೆ ಇಡೀ ಜಗತ್ತು ತಲ್ಲಣಿಸಿದೆ. ದೇಶದಲ್ಲಿ ನಿತ್ಯ ಸಾವಿರಾರು ಮಂದಿ ಕೋವಿಡ್​ಗೆ ಬಲಿಯಾಗುತ್ತಿದ್ದಾರೆ. ಸಾವಿನ ಸರಣಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕೋಟ್ಯಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಕರೊನಾ ವಾರಿಯರ್ಸ್​ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕು ಮಣಿಸುವ ಹೋರಾಟದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಆದರೂ ಬಹುತೇಕ ಜನರು ಮಾಸ್ಕ್​ ಧರಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಇಂತಹ ಜನರಿಗೆ ಅರಿವು ಮೂಡಿಸಲೆಂದೇ ಕೇರಳ ಪೊಲೀಸರು ಡಾನ್ಸ್​ ಮಾಡಿದ್ದಾರೆ. ಒಂದೂವರೆ ನಿಮಿಷ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಿದಲ್ಲಿ ಸಖತ್​ ವೈರಲ್​ ಆಗಿದೆ.

ಈ ಹಾಡಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ ತೊಳೆಯುತ್ತೀರಿ, ಮಾಸ್ಕ್ ಧರಿಸಿ, ಮಾಸ್ಕ್​ ಹಾಕದೆ ಹೊರಬರಬೇಡಿ, ಸ್ಯಾನಿಟೈಸರ್​ ಬಳಸಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ.... ಕರೊನಾ ರೂಲ್ಸ್​ ಬ್ರೇಕ್​ ಮಾಡದೆ ಮಹಾಮಾರಿ ಕೋವಿಡ್​ ಮಣಿಸಲು ಸಹಕರಿಸಿ ಎಂಬ ಸಂದೇಶ ಇದ್ದು, ಕೇರಳ ಸ್ಟೇಟ್​ ಪೊಲೀಸರು ಡಾನ್ಸ್​ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಈ ಡಾನ್ಸ್​ ವಿಡಿಯೋವನ್ನು ಕೇರಳದ ರಾಜ್ಯ ಪೊಲೀಸ್ ಮಾಧ್ಯಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಎಲ್ಲರೂ ಕರೊನಾ ವಿರುದ್ಧ ಹೋರಾಟ ಮಾಡೋಣ. ನಿಮ್ಮೊಂದಿಗೆ ಕೇರಳ ಪೊಲೀಸ್ ಇದೆ ಎಂದು ಬರೆದುಕೊಂಡಿದೆ. ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಪೊಲೀಸರ ವಿನೂತನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.