ನ್ಯೂಸ್

ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಅವಶ್ಯ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಜಾವಳ್ಳಿ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ಬಯೋ ಡೈವರ್ಸಿಟಿ ಫೌಂಡೇಷನ್ ಆಫ್ ರೋಟರಿ ಕ್ಲಬ್ಸ್ ಶಿವಮೊಗ್ಗ ಆಶ್ರಯದಲ್ಲಿ ಗುರುವಾರ ಗಾಡಿಕೊಪ್ಪದ ರೋಟರಿ ಬಯೋ ಡೈವರ್ಸಿಟಿ ಪಾರ್ಕ್‌ನಲ್ಲಿ ಸಸಿ ನೆಡಲಾಯಿತು.

ಅರಬಿಂದೋ ಫೌಂಡೇಷನ್ ಫಾರ್ ಎಜುಕೇಷನ್ ನಿರ್ದೇಶಕ ಡಾ. ಪಿ.ನಾರಾಯಣ್ ಮಾತನಾಡಿ, ಜ್ಞಾನದೀಪ ಶಾಲೆಯು ಮಕ್ಕಳಿಗೆ ಗಿಡ ನೆಡುವ, ಪೋಷಿಸುವ ಪರಿಸರದ ಜವಾಬ್ದಾರಿಯನ್ನು ಮೊದಲಿನಿಂದಲೂ ಕಲಿಸುತ್ತಿದೆ ಎಂದರು.

ರೋಟರಿ ಟ್ರಸ್ಟ್ ಉಪಾಧ್ಯಕ್ಷ ಎಚ್‌ಎನ್‌ಎಸ್ ರಾವ್, ಪ್ರಾಚಾರ್ಯ ಶ್ರೀಕಾಂತ ಹೆಗ್ಡೆ, ಉಪಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್, ಅರಬಿಂದೋ ಫೌಂಡೇಷನ್ ಫಾರ್ ಎಜುಕೇಷನ್ ಕಾರ್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ, ರೋಟರಿ ಟ್ರಸ್ಟ್ ಕಾರ್ಯದರ್ಶಿ ಆನಂದಮೂರ್ತಿ, ಬಯೋಡೈವರ್ಸಿಟಿ ಯೋಜನೆ ಅಧ್ಯಕ್ಷ ಉಮೇಶ್, ಸದಸ್ಯ ಜಿ.ವಿಜಯಕುಮಾರ್ ಇತರರಿದ್ದರು.