ಯೂಕ್ರೇನ್: ಯುದ್ಧಪೀಡಿತ ಯೂಕ್ರೇನ್ನಲ್ಲಿ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ(ಎನ್‌ಪಿಪಿ)ದಲ್ಲಿ ಡೇಟಾ ಡಿಲೀಟ್ ಆಗಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಯೂಕ್ರೇನ್ನಲ್ಲಿ ಬಹುತೇಕ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಮತ್ತು ಇಂಟರ್ನೆಟ್ ಸಂಪರ್ಕವೂ ಸಿಗುತ್ತಿಲ್ಲ.
ಎನ್ಪಿಪಿಯಲ್ಲಿ ಮಾಹಿತಿ ಸಂಪರ್ಕವನ್ನು ಕಳೆದುಕೊಂಡಿದೆ. ರಕ್ಷಣಾ ಮಾನಿಟರಿಂಗ್ ಸಿಸ್ಟಂಗಳಿಂದ ಡೇಟಾ ರವಾನಿಸುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮಹಾನಿರ್ದೇಶಕ ರಾಫೆಲ್ ಗ್ರಾಸ್ಸಿ ತಿಳಿಸಿದ್ದಾರೆ.
ಯೂಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ ಸೇನಾಪಡೆಯು ಕಳೆದ ವಾರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದಿದೆ.