ನ್ಯೂಸ್

ಗುಂಡ್ಲುಪೇಟೆಯಲ್ಲಿ ಬಂಡೆ ಕುಸಿತ, ಬೆಚ್ಚಿದ ಜೂಜುಕೋರರು! ಇಸ್ಪೀಟ್ ಅಡ್ಡೆ ಸ್ಥಳದಿಂದ ಮಾಡಿದ ವಿಡಿಯೋ ವೈರಲ್

ಚಾಮರಾಜನಗರ: ಗುಂಡ್ಲುಪೇಟೆಯ ಮಡಹಳ್ಳಿಯ‌ ಗಣಿಪ್ರದೇಶದಲ್ಲಿ ಕಲ್ಲುಬಂಡೆ ಕುಸಿದ ಘಟನೆ ಬಳಿಕ ಗುಡ್ಡ ಕುಸಿತದ‌ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಅವುಗಳಲ್ಲಿ ಜೂಜುಕೋರರು ಇಸ್ಪೀಟ್ ಅಖಾಡದಿಂದ ತೆಗೆದ ವಿಡಿಯೋ ಸಖತ್ ವೈರಲ್ ಆಗಿದೆ.

ಗುಮ್ಮಕಲ್ಲುಗುಡ್ಡ ಕುಸಿದು ಬೀಳುವ ದೃಶ್ಯವನ್ನು ಇಸ್ಪೀಟ್ ಆಡುವ ಸ್ಥಳದಿಂದ ಚಿತ್ರೀಕರಿಸಿರುವ ಜೂಜಾಡುತ್ತಿದ್ದವರು, ಆ ಭೀಕರತೆಯನ್ನು ಕಂಡು ಇಸ್ಪೀಟ್ ಆಡುವುದುನ್ನು ಬಿಟ್ಟು ಘಟಕ ಸ್ಥಳಕ್ಕೆ ಹೋಗುವ ಬಗ್ಗೆ ಮಾತನಾಡಿರುವುದು ವಿಡಿಯೋದಲ್ಲಿದೆ.

ಬಂಡೆ ಸ್ಫೋಟಗೊಂಡಿಲ್ಲ ಬದಲಿಗೆ ಕುಸಿದಿದೆ. ಅಲ್ಲಿ ಸಿಕ್ಕಿ ಬಿದ್ದವರು ಬಲಿಯಾಗಿರುತ್ತಾರೆ. ಒಬ್ಬರೂ ಕೈಗೆ ಸಿಗಲ್ಲ. ಗಾಡಿಗಳು ಒಂದೂ ಕೈಗೆ ಸಿಗಲ್ಲ. ನೋಡಿಕೊಂಡು ಬರೋಣ. ಆಡಿಕೊಂಡು‌ ಹೋಗಣ. ಹಣ ತೆಗೆದುಕೊಳ್ಳಿ, ಇಸ್ಪೀಟ್ ಕಟ್ ಎತ್ತಿಕೊಳ್ಳಿ ಎಂಬ ಸಂಭಾಷಣೆ ವಿಡಿಯೋದಲ್ಲಿದೆ. ದೃಶ್ಯಾವಳಿ ಕೊನೆಯಲ್ಲಿ ಇಸ್ಪೀಟ್ ಕಾಣಸಿಗುತ್ತದೆ.