ನ್ಯೂಸ್

ನಡುರಸ್ತೆಯಲ್ಲಿ ಕೆಮಿಕಲ್​ ಟ್ಯಾಂಕರ್​ ಸ್ಫೋಟ, ಸುಮಾರು ದೂರದವರೆಗೂ ವ್ಯಾಪಿಸಿದ ಬೆಂಕಿ

ಉತ್ತರಕನ್ನಡ: ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬುಧವಾರ ಬೆಳಗಿನ ಜಾವ ಕೆಮಿಕಲ್ ಟ್ಯಾಂಕರ್ ಸ್ಫೋಟಗೊಂಡಿದ್ದು, ಸುಮಾರು ದೂರದವರೆಗೂ ಬೆಂಕಿ ಆವರಿಸಿದೆ.

ಮಂಗಳೂರಿನಿಂದ ಗುಜರಾತಿಗೆ ತೆರಳಿತ್ತಿದ್ದ ಟ್ಯಾಂಕರ್​ನಲ್ಲಿ ಅರಬೈಲ್ ಘಟ್ಟದಲ್ಲಿ ಹೋಗುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಲಾರಿ ಹೊತ್ತಿ ಉರಿಯಲಾರಂಭಿಸಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ಯಾಂಕರ್​ನಿಂದ ಸುಮಾರು ದೂರದವರೆಗೆ ಕೆಮಿಕಲ್ ಸೋರಿಕೆಯಾಗಿದ್ದರ ಪರಿಣಾಮ ಬೆಂಕಿ ವ್ಯಾಪಿಸಿದೆ. ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಯಲ್ಲಾಪುರ ಮತ್ತು ಮುಂಡಗೋಡು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. (ಇದಿಷ್ಟು ಬೆಳಗ್ಗೆ 9ರ ವರೆಗಿನ ಚಿತ್ರಣ)