ರಾಷ್ಟ್ರರಾಜಧಾನಿಯಲ್ಲಿ ಸಿಕ್ಕಾಪಟೆ ಆಗುತ್ತಿದೆ. ಇಂದು ಕೂಡ ವಿಪರೀತ ಮಳೆ ಸುರಿದಿದ್ದು ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಕೂಡ ನೀರು ತುಂಬಿದ್ದು, ಜನ, ವಾಹನ ಸಂಚಾರಕ್ಕೆ ತೊಡಕಾಗಿದೆ.
ಅಂಡರ್ಪಾಸ್ಗಳಲ್ಲಿ ಮುಳುಗುವಷ್ಟು ನೀರು ನಿಂತಿದ್ದು, ರಸ್ತೆಗಳ ಮೇಲೆ ಕೂಡ ಸೊಂಟದಷ್ಟು ಎತ್ತರಕ್ಕೆ ಬರುವಷ್ಟು ನೀರು ಇದೆ. ಅನೇಕ ಕಡೆಗಳಲ್ಲಿ ಮರಗಳು ಮುರಿದುಬಿದ್ದು, ವಿದ್ಯುತ್ ವ್ಯತ್ಯಯವಾಗಿದೆ. ಗುರ್ಗಾಂವ್, ನೊಯ್ಡಾಗಳಲ್ಲೂ ಇದಕ್ಕೆ ಹೊರತಾಗಿರಲಿಲ್ಲ. ಮಳೆಯಲ್ಲಿ ಸಿಲುಕಿದ ಅದೆಷ್ಟೋ ಜನರು ತಮ್ಮ ಮನೆಯನ್ನು ತಲುಪಲು ಪರದಾಡುವಂತಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದನ್ನೂ ಓದಿ: ಏಕತಾ ಮೂರ್ತಿಗೆ ಸಿಐಎಸ್ಎಫ್ ಕಾವಲು; ಆಗಸ್ಟ್ 25ರಂದು 275 ಸಿಬ್ಬಂದಿ ನಿಯೋಜನೆ
ದಕ್ಷಿಣ ದೆಹಲಿಯ ಸಾಕೇತ್ನಲ್ಲಿರುವ ಶಾಲೆಯೊಂದರ ಕಾಂಪೌಂಡ್ ಗೋಡೆ ಕುಸಿದು ಸುಮಾರು ಏಳು ಕಾರುಗಳು ಜಖಂಗೊಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಗುರ್ಗಾಂವ್ ಅಂಡರ್ಪಾಸ್ನಲ್ಲಿ ನಿಂತಿದ್ದ ಕಾರೊಂದು ಮುಕ್ಕಾಲು ಭಾಗ ಮುಳುಗಿದ್ದು, ಅದರ ಮೇಲ್ಮೈ ಮಾತ್ರ ಕಾಣಿಸುತ್ತಿದೆ. ಈ ಫೋಟೋ ಕೂಡ ಸಿಕ್ಕಾಪಟೆ ವೈರಲ್ ಆಗುತ್ತಿದೆ. ದೆಹಲಿಯಲ್ಲಿ ನಿನ್ನೆಯಿಂದಲೇ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. (ಏಜೆನ್ಸೀಸ್)