ನ್ಯೂಸ್

ಸೂಕ್ತ ವರ ಬೇಕಾಗಿದ್ದಾನೆ... ಈ ಸುಂದರಿಯನ್ನು ಮದುವೆಯಾಗಬೇಕಾದರೆ ಈ ಷರತ್ತುಗಳು ಅನ್ವಯ! Suitable Groom

Suitable Groom : ಮದುವೆಯಾಗಲು ಸೂಕ್ತ ವರನಿಗಾಗಿ ಕಾಯುತ್ತಿರುವ ಮಹಿಳೆಯೊಬ್ಬಳು ಇದೀಗ ಭಾವಿ ಗಂಡನನ್ನು ಹುಡುಕಲು ಬೇರೆಯದೇ ಆದ ವಿನೂತನ ದಾರಿಯನ್ನು ಕಂಡುಕೊಂಡಿದ್ದಾಳೆ.

ಅಂದಹಾಗೆ, ಈ ಕಥೆ ಅಮೆರಿಕದಲ್ಲಿ ನಡೆಯುತ್ತಿದ್ದು, ಕಥೆಯ ನಾಯಕಿ 42 ವರ್ಷದ ಲೀಸಾ ಕ್ಯಾಟಲಾನೊ. ಮದುವೆಯಾಗಬೇಕೆಂಬ ಆಸೆ ಹೊಂದಿರುವ ಲೀಸಾ, ಸೂಕ್ತ ಸಂಗಾತಿಗಾಗಿ ಹುಡುಕಾಡುತ್ತಿದ್ದಾರೆ. ತನ್ನ ಪರಿಚಯಸ್ಥರಲ್ಲಿ ಯಾರೂ ಸಿಗದಿದ್ದಾಗ, ತನ್ನದೇ ಆದ ವೆಬ್‌ಸೈಟ್ ರಚಿಸಿ ಅದರ ಮೂಲಕ ಜಾಹೀರಾತು ನೀಡಿದ್ದಾಳೆ.

ಇನ್ನೂ ಲೀಸಾ ಸಾಹಸ ಅಲ್ಲಿಗೆ ಮುಗಿಯುವುದಿಲ್ಲ. ಇದೀಗ ತನ್ನ ವೆಬ್‌ಸೈಟ್ 'ಮಾರಿ ಲೀಸಾ.ಕಾಮ್' ಅನ್ನು ನಗರದಲ್ಲಿ ಮತ್ತು ಹೆದ್ದಾರಿಗಳ ಎರಡೂ ಬದಿಗಳಲ್ಲಿ ಜಾಹೀರಾತು ಫಲಕಗಳಲ್ಲಿ ಜಾಹೀರಾತು ಮಾಡುತ್ತಿದ್ದಾರೆ. ಕೆಲವರಿಗೆ ಇದು ತಮಾಷೆಯೆಂದು ಅನಿಸಬಹುದು ಆದರೆ, ಮದುವೆಯಾಗುವ ಉದ್ದೇಶದಿಂದಲೇ ಅಂತಹ ನಡೆಯನ್ನು ಕೈಗೊಳ್ಳಲು ಹಣವನ್ನು ಖರ್ಚು ಮಾಡಿದ್ದೇನೆ ಎನ್ನುತ್ತಾರೆ ಲೀಸಾ.

ನಾನು ನನ್ನ ಗಂಡನನ್ನು ಹುಡುಕಲು ಬಯಸುತ್ತೇನೆ ಎಂದು ಲೀಸಾ ಹೇಳಿದ್ದಾರೆ. ಹೆದ್ದಾರಿಯ ಉದ್ದಕ್ಕೂ ದೊಡ್ಡ ಜಾಹೀರಾತು ಫಲಕಗಳಲ್ಲಿ ನೀಡಿರುವ ಜಾಹೀರಾತಿಗಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದನ್ನು ಲೀಸಾ ಬಹಿರಂಗಪಡಿಸಲಿಲ್ಲ. ಇದೀಗ ಲೀಸಾ ಟ್ಯಾಕ್ಸಿಗಳಲ್ಲಿಯೂ ಜಾಹೀರಾತು ನೀಡಲು ನಿರ್ಧರಿಸಿದ್ದಾರೆ.

ಸೂಕ್ತ ವರ ಎನಿಸಿಕೊಳ್ಳಬೇಕಾದರೆ ಲೀಸಾ ನಿಗದಿಪಡಿಸಿರುವ ಎಲ್ಲ ಷರತ್ತುಗಳನ್ನು ಪೂರೈಸಬೇಕು. ಲೀಸಾ ತನ್ನ ವೆಬ್‌ಸೈಟ್‌ನಲ್ಲಿ ತನ್ನ ಬಗ್ಗೆ ಮತ್ತು ತಾನು ಮದುವೆಯಾಗಲು ಬಯಸುವ ವ್ಯಕ್ತಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಿದ್ದಾಳೆ.

ಲೀಸಾ ಅವರು 35 ರಿಂದ 45 ವರ್ಷದೊಳಗಿನ ಗಂಡನನ್ನು ಹುಡುಕುತ್ತಿದ್ದಾಳೆ. ಸಂಗಾತಿಯು ರಾಜಕೀಯ ಮತ್ತು ಧರ್ಮದ ಬಗ್ಗೆ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವ್ಯಕ್ತಿಯಾಗಿರಬೇಕು. ಆಕೆಯ ಆರೋಗ್ಯವನ್ನು ನೋಡಿಕೊಳ್ಳುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ವ್ಯಕ್ತಿಯಾಗಿರಬೇಕು ಎಂಬ ಷರತ್ತುಗಳನ್ನು ಲೀಸಾ ವಿಧಿಸಿದ್ದಾರೆ. (ಏಜೆನ್ಸೀಸ್​)