ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.
ನಿನ್ನೆ ಬೆಳಗ್ಗೆ ರೇಖಾರ ಸಹಚರರಾದ ಪೀಟರ್ ಮತ್ತು ಸೂರ್ಯನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಇದೀಗ ಸ್ಟೆಪನ್, ಅಜಯ್, ಪುರುಷೋತ್ತಮ್ ಎಂಬುವವರನ್ನು ಬಂಧಿಸಲಾಗಿದೆ.
ಕರೊನಾ ಹಿನ್ನೆಲೆ ಬಡ ಜನರಿಗೆ ತನ್ನ ಕಚೇರಿ ಬಳಿ ರೇಖಾ ಊಟ ವಿತರಿಸುತ್ತಿರುವಾಗಲೇ ಅಲ್ಲಿಗೆ ಬಂದ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪೈಕಿ ಪೀಟರ್ ಎಂಬಾತ ರೇಖಾಗೆ ಮುಂಭಾಗದಿಂದ ಚಿಚ್ಚಿದರೆ, ಸೂರ್ಯ ಎಂಬಾತ ಹಿಂಬದಿಯಿಂದ ಚಿಚ್ಚಿದ್ದ. ಸ್ಟೆಫನ್ ಮತ್ತು ಅಜಯ್ ಎಂಬುವವರು ಹಲ್ಲೆ ನಡೆಸುವ ಸಮಯದಲ್ಲಿ ಯಾರಾದರೂ ತಡೆಯಲು ಬಂದಲ್ಲಿ ಗಾರ್ಡ್ ಮಾಡುತ್ತಿದ್ದರು. ಇನ್ನು ಹಲ್ಲೆ ನಡೆಸುವ ಮೊದಲು ರೇಖಾರ ಕಚೇರಿ ಬಳಿಯ ಸಿಸಿ ಕ್ಯಾಮರಾವನ್ನು ತಿರುಗಿಸಿ ಮತ್ತು ಹಲ್ಲೆ ನಡೆಸುವ ಸಮಯದಲ್ಲಿ ವಾಚ್ ಮಾಡಿದ್ದಾನೆ ಪುರುಷೋತ್ತಮ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.