ನ್ಯೂಸ್

ಬೆಳ್ಳಂಬೆಳಗ್ಗೆ ಆಂಜನೇಯ ಸ್ವಾಮಿ ದೇವರ ಪ್ರದಕ್ಷಿಣೆ ಹಾಕಿದ ಬೊಮ್ಮಾಯಿ

ಬೆಂಗಳೂರು: ಕರ್ನಾಟಕದ 30ನೇ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲು 3 ತಾಸು ಇರುವ ಮುನ್ನವೇ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರದ ಆಂನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಬೊಮ್ಮಾಯಿ, ರಾಜ್ಯದ ಜನರಿಗೆ ಒಳ್ಳೆಯದು ಆಗಬೇಕು ಎಂದು ದೇವರ ದರ್ಶನಕ್ಕೆ ಬಂದಿದ್ದೇನೆ ಎಂದರು. ದೇವಸ್ಥಾನಕ್ಕೆ ಆಗಮಿಸಿದ ಖೋಟಾ ಶ್ರೀನಿವಾಸ ಪೂಜಾರಿ ಅವರು ಬೊಮ್ಮಾಯಿಗೆ ಹೂಗುಚ್ಛ ನೀಡಿ ಶುಭಕೋರಿದರು. 'ದೇವರ ಮಂತ್ರಿಗಳು..' ಎಂದು ಬೊಮ್ಮಾಯಿ ಹೇಳಿದರು. ದೇವಸ್ಥಾನ ಪ್ರದಕ್ಷಿಣೆ ಹಾಕಿದ ಬೊಮ್ಮಾಯಿ, ನಂತರ ಕೆಕೆ‌ ಗೆಸ್ಟ್ ಹೌಸ್​ನತ್ತ ಪ್ರಯಾಣ ಬೆಳೆಸಿದರು. ಬಿ.ಎಸ್​.ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿ ಹೊರಬಂದರು.