ನ್ಯೂಸ್

ಇಡೀ ದಿನ ನೀರಲ್ಲೇ ಕಳೆದ ಬಾಲಕ: ರಾಶಿ ಮಷಿನ್​ ನೋಡಲು ಹೋಗಿ ಹಳ್ಳದಲ್ಲಿ ಸಿಲುಕಿದ

arunakunigal

ಮುದ್ದೇಬಿಹಾಳ: ಮನೆಯ ಸಮೀಪ ಹಾಯ್ದು ಹೋಗುತ್ತಿದ್ದ ರಾಶಿ ಮಷಿನ್​ ನೋಡಲೆಂದು ಮನೆಯಿಂದ ಹೊರ ಹೋಗಿದ್ದ ಮಾನಸಿಕ ಅಸ್ವಸ್ಥ ಬಾಲಕನೊಬ್ಬ ಹಳ್ಳದಲ್ಲಿ ಸಿಲುಕಿಕೊಂಡು ಇಡೀ ದಿನ ಅಲ್ಲೇ ಕಳೆದು, ಬದುಕುಳಿದಿದ್ದಾನೆ.

ತಾಲೂಕಿನ ಬನೋಶಿ ಗ್ರಾಮದ ಸಂತೋಷ ವಿರೂಪಾಕ್ಷಪ್ಪ ಮಾದರ(11) ಭಾನುವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದಾನೆ. ಸಂಜೆಯಾದರೂ ಮನೆಗೆ ಆತ ಬರಲಿಲ್ಲ. ಸಂಶಯಗೊಂಡ ಪಾಲಕರು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಬಾಲಕ ಪತ್ತೆಯಾಗಲಿಲ್ಲ.

ಅಷ್ಟರಲ್ಲಿ ಹಳ್ಳದ ಸಮೀಪ ನಾಯಿಯೊಂದು ಜೋರಾಗಿ ಬೊಗಳುತ್ತಿರುವುದನ್ನು ಗಮನಿಸಿದ ಮೀನುಗಾರರು ಅಲ್ಲಿಗೆ ಹೋಗಿ ನೋಡಿದಾಗ ಕೆಸರಿನಲ್ಲಿ ಬಾಲಕ ಸಿಲುಕಿದ್ದ ದೃಶ್ಯ ಕಂಡುಬಂದಿದೆ. ಮನೆಯವರಿಗೆ ಸುದ್ದಿಮುಟ್ಟಿಸಿ, ತಕ್ಷಣ ಆ ಬಾಲಕನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಹಳ್ಳದಲ್ಲಿ ಸಿಲುಕಿ ಹಾಕಿಕೊಳ್ಳದಿದ್ದರೆ ಬಾಲಕ ಬಾವಿ ಪಾಲಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.