ವಿರಾಜಪೇಟೆ: ತುಂಬು ಗರ್ಭಿಣಿಯೊಬ್ಬರು ಪ್ರಸವಕ್ಕಾಗಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭ ಮಾರ್ಗಮಧ್ಯದಲ್ಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ವಿರಾಜಪೇಟೆ ಹೊರವಲಯದ ಕಂಡಂಗಾಲ ಗ್ರಾಮದ ಸಂತೋಷ್ ಅವರ ತೋಟದ ಲೈನ್ ಮನೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರಾಗಿರುವ ಕಲಾಕ್ ಅವರ ಪತ್ನಿ ತುಂಬು ಗರ್ಭಿಣಿ ಶಾರ್ಜಾನ್ ಗಂಡು ಮಗುವಿಗೆ ಜನ್ಮ ನೀಡಿದವರು.
ಶನಿವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ತೋಟದ ಮಾಲಿಕ ಸಂತೋಷ್ ಅವರು ವಿರಾಜಪೇಟೆ ಖಾಸಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸಂತೋಷ್ ಅವರ ಸೂಚನೆಯಂತೆ ಕಂಡಂಗಾಲಕ್ಕೆ ತೆರಳಿದ ವಿರಾಜಪೇಟೆ ಆಂಬುಲೆನ್ಸ್ ಚಾಲಕ ಶೈಜು ಅವರು ಶಾರ್ಜಾನ್ ಅವರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಿದ್ದ ಸಂದರ್ಭ ಮಾರ್ಗದಲ್ಲೇ ಶಾರ್ಜಾನ್ ಅವರಿಗೆ ಹೆರಿಗೆ ನೋವು ಹೆಚ್ಚಾಗಿ ಮಗುವಿಗೆ ಜನ್ಮ ನೀಡಿದ್ದಾರೆ.
ನಂತರ ಆಂಬುಲೆನ್ಸ್ ಚಾಲಕ ಶೈಜು ಅವರು ಶಾರ್ಜಾನ್ ಹಾಗೂ ನವಜಾತ ಶಿಶುವನ್ನು ಸುರಕ್ಷಿತವಾಗಿ ವಿರಾಜಪೇಟೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ. ತಾಯಿ ಮತ್ತು ಮಗು ಅರೋಗ್ಯವಾಗಿದ್ದಾರೆ. ಅಲ್ಲದೇ ಚಾಲಕ ಶೈಜು ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.