ಥಾಯ್ಲೆಂಡ್: ಮಕ್ಕಳ ಡೇ ಕೇರ್ ಕೇಂದ್ರದ ಮೇಲೆ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಗುಂಡಿನ ದಾಳಿ ನಡೆಸಿ, 22 ಮಕ್ಕಳು ಸೇರಿದಂತೆ 35 ಜನರನ್ನು ಕೊಂದ ಭೀಕರ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದ ನೊಂಗ್ಬುವಾ ಲ್ಯಾಂಫು ಪಟ್ಟಣದ ಮಧ್ಯಭಾಗದಲ್ಲಿರುವ ಮಕ್ಕಳ ಡೇ ಕೇರ್ ಕೇಂದ್ರಕ್ಕೆ ಬಂದೂಕು ಹಿಡಿದು ನುಗ್ಗಿದ ಪನ್ಯಾ ಖಮ್ರಾಬ್ ಎಂಬಾತ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಸಾಮೂಹಿಕವಾಗಿ 22 ಮಕ್ಕಳು ಸೇರಿದಂತೆ ಶಿಕ್ಷಕರು-ಸಿಬ್ಬಂದಿ ಸೇರಿ 35 ಜನರನ್ನು ಕೊಂದಿದ್ದಾನೆ. ಬಳಿಕ ಆರೋಪಿಯೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪನ್ಯಾ ಖಮ್ರಾಬ್ನ ಗುಂಡಿನ ದಾಳಿಯಲ್ಲಿ ಈತನ ಹೆಂಡತಿ, ಮಗು ಕೂಡ ಮೃತಪಟ್ಟಿದ್ದಾರೆ. ಕಳೆದ ವರ್ಷ ಈತ ಪೊಲೀಸ್ ಕೆಲಸ ಬಿಟ್ಟು ಹೊರ ಬಂದಿದ್ದ.