ನ್ಯೂಸ್

ಸಭೆಗೂ ಮೊದಲು ಬಿಎಸ್​ವೈ ಜತೆ ಅರುಣ್​ಸಿಂಗ್ ಮಾತುಕತೆ, ಯಡಿಯೂರಪ್ಪರ ಸಲಹೆಗೆ ಆದ್ಯತೆ

arunakunigal

ಬೆಂಗಳೂರು: ಬಿಜೆಪಿ ಶಾಸಕಾಂಗ ಸಭೆ ಆರಂಭಕ್ಕೂ ಮುನ್ನ ಹಂಗಾಮಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ನೂತನ ಸಿಎಂ ಅನ್ನು ಆಯ್ಕೆ ಮಾಡುವ ಜವಾಬ್ದಾರಿ ಹೈಕಮಾಂಡ್​ ಮೇಲಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ಉಸ್ತುವಾರಿ ತಂಡ, ಮೊದಲಿಗೆ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಭೇಟಿ ನೀಡಿತ್ತು.

ಅರುಣ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಕೆಲಕಾಲ ಬಿಜೆಪಿ ಕಚೇರಿಯಲ್ಲೇ ರಹಸ್ಯ ಮಾತುಕತೆ ನಡೆಸಿದರು. ಬಳಿಕ ಸಂಜೆ 4.45ರ ಸುಮಾರಿಗೆ ಬಿಎಸ್​ವೈ ನಿವಾಸಕ್ಕೆ ಅರುಣ್​ ಸಿಂಗ್​ ಭೇಟಿ ನೀಡಿದರು. ನಳಿನ್ ಕುಮಾರ್ ಕಟೀಲ್​, ಗೋವಿಂದ್ ಕಾರಜೋಳ, ವೀರಣ್ಣ ಚರಂತಿ ಮಠ, ವಿಜಯೇಂದ್ರ ಕೂಡ ಆಗಮಿಸಿದರು. ಮುಂದಿನ ಸಿಎಂ ಆಯ್ಕೆ ಬಗ್ಗೆ ಯಡಿಯೂರಪ್ಪ ಅವರ ಸಲಹೆಗೂ ಆದ್ಯತೆ ನೀಡಲಾಗಿದೆ.