ನ್ಯೂಸ್

ಅಡಿಕೆ ಕದಿಯಲು ಮರಗಳನ್ನೇ ಕತ್ತರಿಸಿದ ಕಿಡಿಗೇಡಿಗಳು! ಕರುಳು ಚುರ್​ ಅನ್ನುತ್ತೆ ಈ ದೃಶ್ಯ ನೋಡಿದ್ರೆ

arunakunigal

ಹಾಸನ: ಸಕಲೇಶಪುರ ಪಟ್ಟಣ ಹೊರವಲಯದ ರೈಲ್ವೆ ಸೇತುವೆ ಸಮೀಪ ದುಷ್ಕರ್ಮಿಗಳು ಅಡಿಕೆ ಕಳವು ಮಾಡಲು ಅಡಕೆಮರಗಳನ್ನೇ ಕತ್ತರಿಸಿ ಅಡಿಕೆ ದೋಚಿದ್ದಾರೆ.

ರೈಲ್ವೆ ಸೇತುವೆ ಸಮೀಪ ಶಿಕ್ಷಕ ಸುಬ್ರಹ್ಮಣ್ಯ ಎಂಬುವರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಕಾಫಿ ಹಾಗೂ ಅಡಿಕೆ ತೋಟ ಇದೆ. ಬುಧವಾರ ರಾತ್ರಿ ತೋಟಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಮಾನವೀಯತೆ ಮರೆತು ಬೆಳೆದು ನಿಂತಿದ್ದ 15 ಅಡಿಕೆ ಮರಗಳನ್ನು ಕತ್ತರಿಸಿ ಅಡಿಕೆ ಕದ್ದೊಯ್ದಿದ್ದಾರೆ. ಸಕಲೇಶಪುರ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.