ಬದಿಯಡ್ಕ (ಕಾಸರಗೋಡು): ಎಂಟರ ಹರೆಯದ ಪುಟಾಣಿ ಎರಡು ನಿಮಿಷದಲ್ಲಿ 80 ಪ್ರಶ್ನೆಗಳಿಗೆ ಉತ್ತರಿಸಿ ಅಬಾಕಸ್ ನಡೆಸಿದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಪ್ರಸ್ತುತ ನೆದರ್ಲೆಂಡ್ನಲ್ಲಿ ವಾಸಿಸುತ್ತಿರುವ, ಮೂಲತಃ ನೀರ್ಚಾಲು ನಿವಾಸಿ ಸಾತ್ವಿಕ್ ಚಾತ್ರ ಹಾಗೂ ಅಕ್ಷತಾ ಚಾತ್ರಾ ದಂಪತಿಯ ಪುತ್ರಿ ಅರುಹ್ಯ ಈ ಸಾಧನೆ ಮಾಡಿದ್ದಾಳೆ. ಈಕೆ ಪ್ರಕಾಶ್ ಭಟ್ ಮತ್ತು ಅನುರಾಧಾ ಭಟ್ ದಂಪತಿ ಮೊಮ್ಮಗಳು. ಈಕೆಯ ಸಾಧನೆ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಅಬಾಕಸ್ ಮುಖ್ಯಸ್ಥೆ ಸೀಮಾ ಜೈನ್, ಅರುಹ್ಯಳ ಸಾಧನೆ ನಂಬಲಸಾಧ್ಯ. ಯಾವುದೇ ರೀತಿಯ ಗಣಿತ ಚಮತ್ಕಾರವನ್ನೂ ಕ್ಷಣಗಳಲ್ಲಿ ಪರಿಹರಿಸುವ ಈಕೆಗೆ ಗಣಿತ ಆಟದ ವಿಷಯ ಎಂದರು.
ಅಬಾಕಸ್ ಮಾನಸಿಕ ಏಕಾಗ್ರತೆಯ ಸುಧಾರಣೆ, ಮಾನಸಿಕ ವಿಕಾಸದ ನೆಲೆಯಲ್ಲಿ ವಿಶ್ವಮಟ್ಟದ ಗಣಿತ ಸ್ಪರ್ಧೆ ಆಯೋಜಿಸುತ್ತದೆ. 2021-22ನೇ ಸಾಲಿನ ಸ್ಪರ್ಧೆಯಲ್ಲಿ ಅರುಹ್ಯ ವರ್ಲ್ಡ್ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿರುವುದು ಹೆಮ್ಮೆ ಮೂಡಿಸಿದೆ ಎಂದು ಸೀಮಾ ಜೈನ್ ಹೇಳಿದರು.