ನ್ಯೂಸ್

ಏ.1ರಿಂದ ತಿರುಮಲದಲ್ಲಿ ಎಲ್ಲ ಅರ್ಜಿತ ಸೇವೆಗಳೂ ಪುನರಾರಂಭ

ಬೆಂಗಳೂರು: ತಿರುಮಲ ಬೆಟ್ಟದಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಎಲ್ಲ ಅರ್ಜಿತ ಸೇವೆಗಳನ್ನು ಏ.1ರಂದು ಪುನರಾರಂಭಿಸಲು ಟಿಟಿಡಿ ನಿರ್ಧರಿಸಿದೆ.

ಕೋವಿಡ್​ ಹಿನ್ನೆಲೆಯಲ್ಲಿ 2020ರ ಮಾ.20ರಿಂದ ತಿರುಪತಿ ದೇವಸ್ಥಾನದಲ್ಲಿ ಎಲ್ಲ ರೀತಿಯ ಅರ್ಜಿತ ಸೇವೆಗಳನ್ನು ನಿಲ್ಲಿಸಲಾಗಿತ್ತು. ಈಗ ಕೋವಿಡ್​ ಸೋಂಕಿತರ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಇದರ ಜತೆಗೆ ವರ್ಚುವಲ್​ ಸೇವೆಯೂ ಮುಂದುವರಿಯಲಿದೆ ಎಂದು ಟಿಟಿಡಿ ತಿಳಿಸಿದೆ.

ದೇವಸ್ಥಾನದಲ್ಲಿ ಸುಪ್ರಭಾತಂ, ತೋಮಾಲ, ಅರ್ಚನ, ಅಷ್ಟದಳ ಪಾದ ಪದ್ಮಾರಾಧನೆ, ತಿರುಪ್ಪವಾದ, ಅಭಿಷೇಕ, ಕಲ್ಯಾಣೋತ್ಸವ, ಡೋಲೋತ್ಸವ, ಅರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕಾರ ಸೇವೆಗಳು ಮತ್ತೆ ಆರಂಭವಾಗಲಿವೆ. ಕರೊನಾಗಿಂತ ಮುಂಚೆ ಜಾರಿಯಲ್ಲಿದ್ದ ಎಲ್ಲ ಸೇವೆಗಳೂ ಈಗ ಮುಂದುವರಿಯಲಿವೆ. ಕಾಯ್ದಿರಿಸಿದ ಭಕ್ತರಿಗೆ ಮಾತ್ರ ದರ್ಶನ ವ್ಯವಸ್ಥೆ ಇರಲಿದ್ದು, ನೇರವಾಗಿ ಸೇವೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದೆ.