ನ್ಯೂಸ್

ಕೆಸರಿನಲ್ಲಿ ಹೂತುಹೋಯ್ತು ಕೃಷಿ ಸಚಿವ ಬಿ.ಸಿ.ಪಾಟೀಲ್​ರ ಕಾರು!

ಉಡುಪಿ: ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಕಾರು ಕೆಸರಲ್ಲಿ ಹೂತುಕೊಂಡು ಕೆಲಕಾಲ ಅವಾಂತರ ಸೃಷ್ಟಿಸಿದ್ದ ಘಟನೆ ಉಡುಪಿಯ ಕಡೆಕಾರು ಎಂಬಲ್ಲಿ ನಡೆದಿದೆ.

ಕೃಷಿ ವಿಜ್ಞಾನ ಕೇಂದ್ರದ ಕೇದಾರೋತ್ಥಾನ ಬೇಸಾಯ ಅಭಿಯಾನ ಕಾರ್ಯಕ್ರಮಕ್ಕೆಂದು ಸಚಿವ ಪಾಟೀಲ್ ಕಾರಿನಲ್ಲಿ ಬಂದಿದ್ದರು. ಭಾರಿ ಮಳೆಗೆ ಜಮೀನು ಕೆಸರಿನ ಗದ್ದೆಯಂತಾಗಿದ್ದರಿಂದ ಕಾರು ಹೂತುಕೊಂಡಿತ್ತು. ಆ ವೇಳೆ ಸ್ಥಳದಲ್ಲಿದ್ದ ಯುವಕರು ಸಚಿವರ ಕಾರನ್ನ ಹರಸಾಹಸಪಟ್ಟು ಮೇಲಕ್ಕೆ ಎತ್ತಿದರು.