ನ್ಯೂಸ್

ನೀರಿನ ಟ್ಯಾಂಕ್​ ರೂಪದಲ್ಲಿ ಕೂತಿದ್ದ ಜವರಾಯ, ಆಟವಾಡುತ್ತಲೇ ದುರಂತ ಅಂತ್ಯಕಂಡ 7 ವರ್ಷದ ಬಾಲಕಿ

ಚಿಕ್ಕಮಗಳೂರು: ಫಟಾಫಟ್​ ಮಾತಾಡುತ್ತಾ ಎಲ್ಲರನ್ನೂ ನಗಿಸುತ್ತಿದ್ದ 7 ವರ್ಷದ ಬಾಲಕಿ ಎಸ್ಟೇಟ್​ನಲ್ಲಿ ಆಟವಾಡುತ್ತಲೇ ದುರಂತ ಅಂತ್ಯ ಕಂಡಿದ್ದಾಳೆ.

ಗೀತಾ-ಶೇಷಪ್ಪ ದಂಪತಿ ಪುತ್ರಿ ಪ್ರಾರ್ಥನಾ ಮೃತ ದುರ್ದೈವಿ. ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಎಸ್ಟೇಟ್​ನಲ್ಲಿ ಆಟವಾಡುತ್ತಿದ್ದ ಪ್ರಾರ್ಥನಾ, ನೀರಿನ ಟ್ಯಾಂಕ್​ಗೆ ಬಿದ್ದು ಕೊನೆಯುಸಿರೆಳೆದಿದ್ದಾಳೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.