ನ್ಯೂಸ್

39 ವರ್ಷಕ್ಕೆ ಅಜ್ಜಿಯಾದ ಮಹಿಳೆ! 39 Year Old Grandmother ಇದು ಹೇಗೆ ಸಾಧ್ಯವೆಂದ ನೆಟ್ಟಿಗರು...

ಚೀನಾ :  ( 39 Year Old Grandmother ) ಚೀನಾದ ಈಶಾನ್ಯ ಪ್ರಾಂತ್ಯದ ಮಹಿಳೆಯೊಬ್ಬಳು 39 ವರ್ಷಕ್ಕೆ ಅಜ್ಜಿಯಾಗಿದ್ದಾಳೆ. ಆಕೆ ಮೊಮ್ಮಗುವಿನೊಂದಿಗೆ ಇರುವ ಫೋಟೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುವುದರ ಜತೆಗೆ ಇದು ಹೇಗೆ ಸಾಧ್ಯವೆಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

1985ರಲ್ಲಿ ಹುಟ್ಟಿದ ಯುವತಿ ಫೋಟೋದಲ್ಲಿ ಇದ್ದಾರೆ ಅಂತ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ರಿಪೋರ್ಟ್ ಮಾಡಿದೆ. ಅಂದ್ರೆ ಆ ಯುವತಿಗೆ ಈಗ 39 ವರ್ಷ ವಯಸ್ಸು. ಕೂದಲು ಪೋನಿಟೆಲ್ ಹಾಕಿ, ಸ್ವಲ್ಪ ಮೇಕಪ್ ಹಾಕೊಂಡು, ಯಂಗ್ ಆಗಿರೋ ತರ ಕಾಣೋ ಯುವತಿ ತನ್ನ ಮೊಮ್ಮಗುವಿಗೆ ನಗುತ್ತಾ ಹಾಲು ನೀಡುತ್ತಿರೋ ಫೋಟೋ ವೈರಲ್ ಆಗಿದೆ.

ಫೋಟೋದಲ್ಲಿ ಮಗುವನ್ನ ಎತ್ತಿಕೊಂಡು ಮನೆಯ ಕೆಲಸ ಮಾಡೋದು, ಮಗುವಿನ ನ್ಯಾಪ್ಕಿನ್ ಚೇಂಜ್ ಮಾಡೋದು, ಅವನ ಬೇರೆ ಅವಶ್ಯಕತೆಗಳಿಗೆ ಮತ್ತು ಊಟ ಮಾಡೋಕೆ ಓಡಾಡೋ ಯುವತಿಯನ್ನ ನೋಡಬಹುದು.

ಮಹಿಳೆಗೆ ಇದು ಮೊದಲ ಮೊಮ್ಮಗು ಅಂತ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ರಿಪೋರ್ಟ್ ಮಾಡಿದೆ. ಈ ಮಧ್ಯೆ ಯುವತಿಯ ಸೊಸೆ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಬ್ಬರ ವಯಸ್ಸೆಷ್ಟು ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಆ ಯುವತಿ ಇನ್ನೂ ಮದುವೆ ಆಗಿಲ್ಲ ಅಂತ ಹೇಳುತ್ತಿದ್ದಾರೆ.

ಆದರೆ ಈ ಯುವತಿ ಯಾರು? ನಿಜ್ವಾಗಲೂ ಇದು ಇವಳ ಮೊಮ್ಮಗ, ಸೊಸೆನಾ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ  ಮಹಿಳೆಗೆ ಇದು ಮೊದಲ ಮೊಮ್ಮಗು ಅಂತ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ರಿಪೋರ್ಟ್ ಮಾಡಿದೆ.