Married Woman : ಅಪ್ರಾಪ್ತ ವಿದ್ಯಾರ್ಥಿಯ ಜೊತೆ ಓಡಿ ಹೋಗಿದ್ದ ಮೂರು ಮಕ್ಕಳ ತಾಯಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡು ಆತನೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ. ಈ ಸುದ್ದಿ ಇದೀಗ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಬ್ನಮ್ ಎಂದು ಗುರುತಿಸಲ್ಪಟ್ಟ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ತನ್ನ ಹೆಸರನ್ನು ಶಿವಾನಿ ಎಂದು ಬದಲಾಯಿಸಿಕೊಂಡಿದ್ದಾಳೆ. ಈಕೆಗೆ ಈಗಾಗಲೇ ಎರಡು ಬಾರಿ ಮದುವೆ ಆಗಿದ್ದು, ಮೂವರು ಮಕ್ಕಳು ಸಹ ಇದಾರೆ. ಆಕೆ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು ಎಂದು ಹಸನ್‌ಪುರ ಸರ್ಕಲ್ ಇನ್ಸ್ಪೆಕ್ಟರ್ ದೀಪ್‌ಕುಮಾರ್ ಪಂತ್ ಹೇಳಿದ್ದಾರೆ.
ಶಬ್ನಮ್ ತನ್ನ ನೆರೆಮನೆಯ ವಿದ್ಯಾರ್ಥಿ ಶಿವ ಎಂಬುವನ ಜತೆ ಪ್ರೇಮ ಸಂಬಂಧವನ್ನು ಬೆಳೆಸಿದ್ದಳು. ಕಳೆದ ಶುಕ್ರವಾರವಷ್ಟೇ ತಮ್ಮ ಎರಡನೇ ಪತಿಗೆ ವಿಚ್ಛೇದನ ನೀಡಿ, ಇದೀಗ ಶಿವನ ಜತೆ ಮದುವೆ ಆಗಿದ್ದಾಳೆ. ನಾವಿಬ್ಬರೂ ಸ್ವಇಚ್ಛೆಯಿಂದ ವಿವಾಹವಾಗಿದ್ದೇವೆ ಮತ್ತು ಇಬ್ಬರೂ ಸಂತೋಷವಾಗಿದ್ದೇವೆ. ನಾವಿಬ್ಬರೂ ಮೇಜರ್ ಆಗಿದ್ದು, ನಮ್ಮ ಜೀವನದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಶಬ್ನಮ್ ಹೇಳಿದ್ದಾಳೆ.
ವರದಿಯ ಪ್ರಕಾರ, ಆರಂಭದಲ್ಲಿ ಇಬ್ಬರ ಸಂಬಂಧಕ್ಕೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಬಳಿಕ ಅಲ್ಲಿನ ಪಂಚಾಯತಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿತು. ಸಾಕಷ್ಟು ಚರ್ಚೆಯ ಬಳಿಕ ಶಬ್ನಮ್ ಎಲ್ಲಿ ಬೇಕಾದರೂ ವಾಸಿಸಬಹುದು ಎಂದು ಪಂಚಾಯತಿ ತೀರ್ಪು ನೀಡಿತು. ಹೀಗಾಗಿ ಇಬ್ಬರ ಮದುವೆಗೆ ಇದ್ದ ಅಡ್ಡಿ ನಿವಾರಣೆ ಆಯಿತು.
ಅಂದಹಾಗೆ ಶಬ್ನಮ್, 8 ವರ್ಷಗಳ ಹಿಂದೆಯೇ ಅಲಿಗಢದ ಸಯೀದ್ ನಾಗ್ಲಿ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಗಂಡನಿಂದ ದೂರಾದ ನಂತರ, ಶಬ್ನಮ್ ಎರಡನೇ ಬಾರಿಗೆ ವಿವಾಹವಾದರು. ಆದಾಗ್ಯೂ, ಒಂದು ವರ್ಷದ ಹಿಂದೆ ಎರಡನೇ ಗಂಡ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಂಗವಿಕಲರಾದರು. ಅದೇ ಸಮಯದಲ್ಲಿ, ಶಬ್ನಮ್ ಅದೇ ಪ್ರದೇಶದ ಶಿವ ಎಂಬ ಯುವಕನಿಗೆ ಹತ್ತಿರವಾದರು. ಕೊನೆಗೆ, ಅವರಿಬ್ಬರು ಸಮೀಪದ ದೇವಸ್ಥಾನದಲ್ಲಿ ವಿವಾಹವಾದರು. ಶಬ್ನಮ್ ಅವರ ಮಕ್ಕಳು ತಮ್ಮ ಮಾಜಿ ಪತಿಯೊಂದಿಗೆ ವಾಸಿಸುತ್ತಿದ್ದಾರೆ.
ವಿವಾಹ ಸಮಾರಂಭವು ಹಳ್ಳಿಯ ದೇವಸ್ಥಾನದಲ್ಲಿ ನಡೆಯಿತು. ಉತ್ತರ ಪ್ರದೇಶವು ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನು ಇರುವ ರಾಜ್ಯವಾಗಿದೆ. ಬಲವಂತದ ಅಥವಾ ವಂಚನೆಯ ಮತಾಂತರವು ಅಪರಾಧವಾಗಿದೆ ಮತ್ತು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)