ರಾಯಚೂರು: ಹೀಟರ್ ಬಳಸಿ ಸ್ನಾನಕ್ಕೆಂದು ನೀರು ಕಾಯಿಸುತ್ತಿದ್ದ ಯುವತಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಜಿಲ್ಲೆಯಲ್ಲಿ ಸಂಭವಿಸಿದೆ.
ಲಿಂಗಸಗೂರು ತಾಲೂಕಿನ ಕಸಬಾ ಲಿಂಗಸೂರಿನ ಕಸಬಾಲಿಂಗಸೂರಿನ ರೇಣುಕಮ್ಮ(23) ಮೃತ ದುರ್ದೈವಿ.
ಭಾನುವಾರ ಬೆಳಗ್ಗೆ ಸ್ನಾನಕ್ಕೆಂದು ರೇಣುಕಮ್ಮ ಹೀಟರ್ನಿಂದ ನೀರು ಕಾಯಿಸುತ್ತಿದ್ದಳು. ಸ್ವಿಚ್ ಬೋರ್ಡ್ ಆಫ್ ಮಾಡದೇ ನೀರಿನಲ್ಲಿ ಕೈ ಇಟ್ಟಿದ್ದು, ವಿದ್ಯುತ್ ಪ್ರವಹಿಸಿ ಆಕೆ ಸತ್ತಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಕರೆತಂದರಾದರೂ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.