ನ್ಯೂಸ್

ಮಣಪ್ಪುರಂ ಗೋಲ್ಡ್​ ಲೋನ್​ ಕಚೇರಿಗೆ ನುಗ್ಗಿ 15 ಕೆಜಿ ಚಿನ್ನ ದರೋಡೆ! ಎನ್​ಕೌಂಟರ್​ಗೆ ಇಬ್ಬರು ಬಲಿ

ಆಗ್ರಾ: ಮಣಪ್ಪುರಂ ಗೋಲ್ಡ್​ ಲೋನ್​ ಫೈನಾನ್ಸ್ ಕಚೇರಿಗೆ ಬಂದೂಕು ಹಿಡಿದು ನುಗ್ಗಿದ 6 ಮಂದಿ ದರೋಡೆಕೋರರು 15 ಕೆಜಿ ಚಿನ್ನ, 5 ಲಕ್ಷ ರೂಪಾಯಿ ನಗದು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಕಮಲಾ ನಗರದಲ್ಲಿ ನಡೆದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 6 ಮಂದಿ ಪೈಕಿ ಇಬ್ಬರು ದರೋಡೆಕೋರರನ್ನು ಎನ್​ಕೌಂಟರ್​ ಮಾಡಿದ್ದಾರೆ. ಆರೋಪಿಗಳಾದ ಮನೀಷ್​ ಪಾಂಡೆ ಮತ್ತು ನಿದೋರ್ಷ್​ ಕುಮಾರ್​ ಮೃತರು.

ಶಸ್ತ್ರಾಸ್ತ್ರಗಳನ್ನು ಹಿಡಿದು ಮುಸುಕುಧಾರಿಗಳಾಗಿ ನುಗ್ಗಿದ ಮಣಪ್ಪುರಂ ಕಚೇರಿಗೆ ನುಗ್ಗಿದ ದರೋಡೆಕೋರರ ತಂಡ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಮತ್ತು ಹಣ ತುಂಬಿಕೊಂಡು 20 ನಿಮಷದಲ್ಲಿ ಪರಾರಿಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಚೇರಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ದರೋಡೆಕೋರರ ಪತ್ತೆಗೆ ಮಿಂಚಿನ ಕಾರ್ಯಾಚರಣೆ ನಡೆಸಿತ್ತು. ಸಮೀಪದ ಮೆಡಿಕಲ್​ ಶಾಪ್​ವೊಂದರಲ್ಲಿ ದರೋಡೆಕೋರರು ಇರುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ಮಾಡಿದ್ದು, ಆ ವೇಳೆ ದರೋಡೆಕೋರರ ತಂಡ ಪೊಲೀಸರತ್ತ ಗುಂಡಿನ ದಾಳಿ ಮಾಡಿತ್ತು. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದು. ಆರೋಪಿಗಳಿಬ್ಬರು ಎನ್​ಕೌಂಟರ್​ಗೆ ಬಲಿಯಾಗಿದ್ದಾರೆ. ಅವರಿಂದ 7.5 ಕೆಜಿ ಚಿನ್ನ, ಒಂದೂವರೆ ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.