ನ್ಯೂಸ್

ಟೀಚರ್​ ಹೊಡೆದಿದ್ದಕ್ಕೆ ಮಹಡಿಯಿಂದ ಜಿಗಿದು ಬಾಲಕ ಆತ್ಮಹತ್ಯೆ | Jumping

Jumping:ತನ್ನ ಟೀಚರ್​ ಎಲ್ಲರ ಎದುರು ಕೆನ್ನೆಗೆ ಹೊಡೆದಿದ್ದರಿಂದ ಅವಮಾನವಾಗಿದೆ ಎಂದು ಹೈದರಾಬಾದ್​ನ ಸಾಗಾರ್​ ಗ್ರಾಮ್​ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಲ್ಲಿನ ದ್ವಾರಕ ನಗರದ ಧರ್ಮರೆಡ್ಡಿ ಮತ್ತು ಸಂಗೀತಾ ದಂಪತಿಗಳ ಎರಡನೇ ಮಗ ಸಂಗರೆಡ್ಡಿ(14) ಮೃತ ಬಾಲಕ. 8ನೇ ತರಗತಿಯಲ್ಲಿ ಓದುತ್ತಿದ್ದ ಸಂಗರೆಡ್ಡಿ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದ ಎನ್ನಲಾಗಿದೆ. ಯಾವುದೋ ಕಾರಣ(ಕಾರಣ ಬಹಿರಂಗಪಡಿಸಿಲ್ಲ)ಕ್ಕೆ ದೈಹಿಕ ಶಿಕ್ಷಕ ಕನ್ನೆಗೆ ಬಾರಿಸಿದ್ದಾರೆ. ಈ ಹಿನ್ನೆಲೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡ ಬಾಲಕ, ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಶಾಲೆಯ ಕಟ್ಟಡ ಏರಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇನ್ನು ವಿದ್ಯಾರ್ಥಿಯ ಪಾಲಕರು ಮತ್ತು ಸಂಬಂಧಿಕರು ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯೇ ನೇರ ಕಾರಣ ಎಂದು ಆರೋಪಿಸಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ನು ಶಾಲೆಯ ಎದುರು ಕೊಂಚ ಕಾಲ ಪ್ರತಿಭಟನೆ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನೆಕಾರರನ್ನು ಸಮಾಧಾನಪಡಿಸಿದ್ದಾರೆ. ಇನ್ನು ಶಿಕ್ಷಕ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)