ಡೆಹ್ರಾಡೂನ್: ಚಾರ್ಧಾಮ್ ಯಾತ್ರೆ ಆರಂಭಗೊಂಡ 27 ಒಟ್ಟು 108 ಯಾತ್ರಿಕರು ಮೃತಪಟ್ಟಿದ್ದಾರೆ. ಸದ್ಯ ಸುಮಾರು 12 ಲಕ್ಷ ಮಂದಿ ಯಾತ್ರೆಯಲ್ಲಿದ್ದಾರೆ.
ಹಿಮಾಲಯ ಪರ್ವತದಲ್ಲಿರುವ ಪುಟ್ಟ ರಾಜ್ಯ ಉತ್ತರಾಖಂಡದಲ್ಲಿನ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಪ್ರತಿವರ್ಷ ವಿಶ್ವದ ಮೂಲೆ-ಮೂಲೆಗಳಿಂದಲೂ ಹಿಂದೂಗಳು ಮತ್ತು ಇತರರೂ ಆಗಮಿಸುತ್ತಾರೆ. ಇವುಗಳು ಚಾರ್ಧಾಮ್ ಎಂದೇ ಖ್ಯಾತಿ ಪಡೆದಿವೆ. ಈ ಭಾರಿ ಚಾರ್ಧಾಮ್ ಯಾತ್ರೆ ಮೇ 3ರಂದು ಆರಂಭವಾಗಿದ್ದು, ಕೇವಲ 27 ದಿನಗಳ ಅವಧಿಯಲ್ಲಿ 108 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ.
2019ರಲ್ಲಿ ತೀರ್ಥಯಾತ್ರೆಯ ಸಂಪೂರ್ಣ 6 ತಿಂಗಳ ಅವಧಿಯಲ್ಲಿ ದಾಖಲಾಗಿದ್ದು 90 ಸಾವು. ಕರೊನಾ ಹಿನ್ನೆಲೆ 2020 ಮತ್ತು 2021ರಲ್ಲಿ ಈ ಯಾತ್ರೆಯನ್ನ ಮೊಟಕುಗೊಳಿಸಲಾಗಿತ್ತು. ಆದರೆ ಈ ಭಾರಿ 27 ದಿನಕ್ಕೇ 108 ಯಾತ್ರಿಕರ ಸಾವಿನ ಪ್ರಕರಣ ಆತಂಕ ಹುಟ್ಟಿಸಿದೆ. ಜತೆಗೆ ಸಂದೇಹವನ್ನೂ ಮೂಡಿಸಿದೆ. ಬಹುತೇಕ ಸಾವಿನ ಪ್ರಕರಣಗಳು 10,000 ಅಡಿ ಮತ್ತು 12,000 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ದೇಗುಲದ ಪಟ್ಟಣಗಳಲ್ಲೇ ಸಂಭವಿಸಿದೆ. ಹಾಗಾಗಿ ಇದಕ್ಕೆ ಹೃದಯಸ್ತಂಭನ, ರಕ್ತದೊತ್ತಡ ಕಾರಣ ಎನ್ನಲಾಗುತ್ತಿದೆ. ಪರೋಕ್ಷವಾಗಿ ಕೋವಿಡ್ಗೆ ಸಂಬಂಧಿಸಿದ್ದಾಗಿರಬಹುದು ಎನ್ನಲಾಗುತ್ತಿದೆ.