ನ್ಯೂಸ್

ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಬಾಲಕಿ ಗರ್ಭಿಣಿ ಎಂಬ ಸತ್ಯ ಬಯಲು: 43ರ ಪೊಲೀಸ್​ ಅಧಿಕಾರಿ ಬಂಧನ

ಕೊಚ್ಚಿ: ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಬಾಲಕಿಯೊಬ್ಬಳು ಗರ್ಭಿಣಿಯಾಗಿರುವ ಸುದ್ದಿ ಹೊರಬಿದ್ದ ಕೂಡಲೇ ಪೊಲೀಸ್​ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳದ ವೆಲ್ಲರಾಡದಲ್ಲಿ ನಡೆದಿದೆ.

ಬಂಧಿತರನ್ನು ಮರಯೂರ್​ ಠಾಣಾ​ ಸಿಪಿಒ ದಿಲೀಪ್​ (43) ಎಂದು ಗುರುತಿಸಲಾಗಿದೆ. ಅರ್ಯಾಂಕೋಡ್​ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿ ದಿಲೀಪ್​, ಸಂತ್ರಸ್ತ ಬಾಲಕಿಗೆ ದೂರದ ಸಂಬಂಧಿ ಆಗಬೇಕು.

9ನೇ ತರಗತಿ ಓದುತ್ತಿರುವ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಹೊಟ್ಟೆ ನೋವಿ ಅನುಭವಿಸುತ್ತಿದ್ದಳು. ಇತ್ತೀಚೆಗೆ ಹೋಟೆ ನೋವು ಸಹಿಸಿಕೊಳ್ಳಲಾಗದಷ್ಟು ಜಾಸ್ತಿಯಾದ್ದರಿಂದ ಪಾಲಕರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯ ಹೊಟ್ಟೆಯನ್ನು ಸ್ಕ್ಯಾನ್​ ಮಾಡಿ, ವರದಿಯನ್ನು ನೋಡಿದ ವೈದ್ಯರಿಗೆ ಶಾಕ್​ ಒಂದು ಕಾದಿತ್ತು.

ಸ್ಕ್ಯಾನಿಂಗ್​ ವರದಿಯಲ್ಲಿ ಬಾಲಕಿ ಗರ್ಭಿಣಿ ಎಂಬ ಬಯಲಾಯಿತು. ಇದನ್ನು ಕೇಳಿ ಬಾಲಕಿಯ ಪಾಲಕರಿಗೂ ಆಘಾತವಾಯಿತು. ಬಳಿಕ ವಿಚಾರಿಸಿದಾಗ ಪೊಲೀಸ್​ ಅಧಿಕಾರಿ ಕಾಮಕಾಂಡವನ್ನು ಹುಡುಗಿ ಬಿಚ್ಚಿಟ್ಟಿದ್ದು, ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)