ನ್ಯೂಸ್

VIDEO | ಮುಂಬೈನ ವಲಸೆ ಕಾರ್ಮಿಕರಿಗೆ 99 ವರ್ಷದ ವೃದ್ಧೆ ಆಹಾರ ತಯಾರಿಸುತ್ತಿರುವ ವಿಡಿಯೋ ವೈರಲ್​

ಮುಂಬೈ: ರಾಷ್ಟ್ರದ ವಾಣಿಜ್ಯ ನಗರ ಮುಂಬೈನಲ್ಲಿ 99 ವರ್ಷದ ವೃದ್ಧೆ ವಲಸೆ ಕಾರ್ಮಿಕರಿಗೆ ರೊಟ್ಟಿ ತಯಾರಿಸಿ ಪ್ಯಾಕ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪಾಕಿಸ್ತಾನದ ಕರಾಚಿ ಮೂಲದ ವಕೀಲ ಜಾಹೀದ್​ ಎಫ್ ಇಬ್ರಾಹಿಂ ಎಂಬುವವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ 99 ವರ್ಷದ ವೃದ್ಧೆ ವಲಸೆ ಕಾರ್ಮಿಕರಿಗೆ ಆಹಾರ ತಯಾರಿಸಿ ಅದನ್ನು ಪ್ಯಾಕ್​ ಮಾಡುತ್ತಿದ್ದಾರೆ ಎಂದು ವಿಡಿಯೋಗೆ ಶಿರ್ಷಿಕೆ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅಪ್​ಲೋಡ್​ ಆಗುತ್ತಿದ್ದಂತೆ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ.

ವೀಕ್ಷಣೆ ಮಾಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ವೃದ್ಧೆಯ ಆರೋಗ್ಯ ಚೆನ್ನಾಗಿರಲಿ, ಇವರ ಕೆಲಸ ಶ್ಲಾಘನೀಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಓರ್ವ ನೆಟ್ಟಿಗ ಈ ವಿಡಿಯೋ ನನ್ನಲ್ಲಿದ್ದ ಕೆಟ್ಟ ಚಿಂತನೆಯನ್ನು ನಾಶ ಮಾಡಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)