ನ್ಯೂಸ್

99ರ ವಯಸ್ಸಲ್ಲೂ ರೂಪದರ್ಶಿ ಆದ ಮಹಿಳೆ; ಮೊಮ್ಮಗಳ ಬ್ರ್ಯಾಂಡ್​ಗೆ ಅಜ್ಜಿಯೇ ರಾಯಭಾರಿ

ನವದೆಹಲಿ: ಯಾವುದೇ ಉತ್ಪನ್ನಕ್ಕೆ ರೂಪದರ್ಶಿಯನ್ನು ಆಯ್ಕೆ ಮಾಡುವಾಗ ಯುವತಿಯರನ್ನೇ ಸಾಮಾನ್ಯವಾಗಿ ಆರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಕಡೆ ಸೌಂದರ್ಯವರ್ಧಕ ಉತ್ಪನ್ನವೊಂದಕ್ಕೆ 99ರ ವೃದ್ಧೆಯನ್ನು ಆರಿಸಿಕೊಂಡಿದ್ದಾರೆ. ವಿಶೇಷವೆಂದರೆ ಮೊಮ್ಮಗಳ ಉತ್ಪನ್ನಕ್ಕೆ ಅಜ್ಜಿಯೇ ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ.

ಕ್ಯಾಲಿಫೋರ್ನಿಯಾದ ಹೆಲೆನಿ ಸೈಮನ್​ ಎಂಬ 99ರ ವೃದ್ಧೆ ಇಂಥದ್ದೊಂದು ಬೆಳವಣಿಗೆ ಮೂಲಕ ವಯಸ್ಸು ಎನ್ನುವುದು ಬರೀ ಒಂದು ಸಂಖ್ಯೆ ಎಂದು ಸಾಬೀತು ಮಾಡಿದ್ದಾರೆ. ಮಾತ್ರವಲ್ಲ, ಇತರರಿಗೂ ಈ ಮೂಲಕ ಪ್ರೇರಣೆಯಾಗಿದ್ದಾರೆ.

ಈಕೆಯ ಮೊಮ್ಮಗಳು ಲೇನಿ ಕ್ರೊವೆಲ್​, ತನ್ನ ಕಂಪನಿಯ ಬ್ರ್ಯಾಂಡ್​ 'ಸಾಯೀ'ಗೆ ರೂಪದರ್ಶಿಯನ್ನು ಅರಸುತ್ತಿದ್ದಾಗ ಅಜ್ಜಿಯೇ ಸೂಕ್ತ ಎಂಬ ಸಲಹೆ ಹಲವೆಡೆಯಿಂದ ಬಂದಿತ್ತಂತೆ. ಈ ಬಗ್ಗೆ ಅಜ್ಜಿಯನ್ನು ಸಂಪರ್ಕಿಸಿದಾಗ ಆಕೆ ಒಪ್ಪಲಿಲ್ಲ. ಕೊನೆಗೂ ತುಂಬಾ ಮನವರಿಕೆ ಮಾಡಿಸಿ ಒಪ್ಪಿಸಲಾಯಿತು ಎಂದು ಮೊಮ್ಮಗಳು ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್​)