ನ್ಯೂಸ್

ರಾಜ್ಯದಲ್ಲಿ ಒಂದೇ ದಿನ 9,746 ಹೊಸ ಕರೊನಾ ಪ್ರಕರಣಗಳು; 128 ಮಂದಿ ಸಾವು

ರಾಜ್ಯದಲ್ಲಿ ಇಂದು ಬರೋಬ್ಬರಿ 9746 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ , 89,232ಕ್ಕೆ ಏರಿಕೆಯಾಗಿದೆ.

ಹಾಗೇ, ಇಂದು ಒಂದೇ ದಿನ 9102 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ. 128 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕರೊನಾದಿಂದ ಡಿಸ್​ಚಾರ್ಜ್​ ಆದವರ ಸಂಖ್ಯೆ 2,83,298 ಆಗಿದ್ದು, ಮೃತರು 6298. ಹಾಗೇ ಸಕ್ರಿಯ ಪ್ರಕರಣಗಳು 99,617 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.