60 ಆಗುತ್ತಿದ್ದಂತೆ ಕೆಲವರು ನಮ್ಮದೇನು ಎಲ್ಲ ಮುಗಿಯಿತು. ಜೀವನ ನಿಂತೇ ಬಿಟ್ಟಿದೆ ಎನ್ನುತ್ತಾರೆ. ಕೆಲವೊಮ್ಮೆ ದೇಹ ಸಹಕರಿಸಲ್ಲ. ಆದರೆ ಕೆಲವೊಮ್ಮೆ ಇವರಿಗೆ ಮನಸ್ಸಿರುವುದಿಲ್ಲ!
ಫೇಸ್ಬುಕ್ನಲ್ಲಿ ಅಮೆರಿಕದ ಗೋಲ್ಡನ್ ಏಜ್ ಹೊಮ್ ಹೆಲ್ತ್ ಕೇರ್ ಹಂಚಿಕೊಂಡಿರುವ ಈ ವಿಡಿಯೋ ನೋಡಿದರೆ ಅಯ್ಯೋ ವಯಸ್ಸಾಯ್ತು ಎನ್ನುವ ಮನಸ್ಥಿತಿ ಬದಲಾಗುವುದು ಖಂಡಿತ. ಪೆಪ್ಪಿ ಹಾಡಿಗೆ ಹೆಜ್ಜೆ ಹಾಕಿರುವ 91 ವರ್ಷದ ಜೂಲಿಯ ಅವರ ವಿಡಿಯೋ ಇದು.
ಬಹುದಿನಗಳಿಂದ ಪಿಸಿಯೋಥೆರಪಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೂಲಿಯ, ಒಂದು ದಿನ ವಾಕರ್ ತೆಗೆದಿಟ್ಟು ಶೂ ಹಾಕಿಕೊಂಡು ಡಾನ್ಸ್ ಮಾಡಲು ನಿರ್ಧರಿಸಿದ್ದರು.
ಜೂಲಿಯ ಅವರು, ಇಲ್ಲಿ ತುಂಬ ದಿನಗಳಿಂದ ಉಳಿದುಕೊಂಡಿದ್ದಾರೆ. ಕೆಲ ದಿನಗಳಿಂದ ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ವಾಕರ್ನ್ನು ಎಸೆದು ಶೂ ತೊಟ್ಟರು. "ಸಂತೋಷ ಎನಿಸುತ್ತಿದೆ. ಕುಣಿದಾಡಬೇಕು. ನಾನು ನನ್ನ ಜೀವನವನ್ನು ತುಂಬ ಪ್ರೀತಿಸುತ್ತೇನೆ" ಎಂದು ತಿಳಿಸಿದರು ಎಂದು ಫೇಸ್ ಬುಕ್ನಲ್ಲಿ ಬರೆದುಕೊಂಡಿದೆ ಆ ಗೋಲ್ಡನ್ ಏಜ್ ಹೊಮ್.
ಅಲ್ಲದೆ, "ನೀವು ಮಾಡುವ ನೃತ್ಯಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಬದಲಿಗೆ ನಿನ್ನ ಜತೆ ನಾವು ಭಾಗವಹಿಸುತ್ತೇವೆ ಎಂದೆವು. ಅದರ ವಿಡಿಯೋವನ್ನು ಇಲ್ಲಿ ಹಾಕಿದ್ದೇವೆ. ಮತ್ತು ಜುಲಿಯ ವಯಸ್ಸು ಇನ್ನು 91 ಎಂದು ಬರೆದಿದ್ದೇವೆ ಗಮನಿಸಿ" ಎಂದು ತಿಳಿಸಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಜನವರಿ 15ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೆ 81,500 ಸಾವಿರ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಅದೆಷ್ಟೋ ನೆಟ್ಟಿಗರು ಆಕೆಯ ಆರೋಗ್ಯ ಮತ್ತು ಸಂತೋಷಕ್ಕೆ ಹಾರೈಸಿದ್ದಾರೆ.
"91ರಲ್ಲಿ ಈ ನೃತ್ಯ ಅದ್ಭುತ...." ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು, "ಲವ್ ಇಟ್, ಅವರು ಅದೆಷ್ಟು ಸಂತಸ ಮತ್ತು ಆರೋಗ್ಯದಿಂದ್ದಾರೆ... " ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು "ಇಂತಹ ವಿಡಿಯೋ ಹಂಚಿಕೊಂಡು ನಮ್ಮ ಸಂತಸವನ್ನು ಹೆಚ್ಚಿಸಿದ್ದಕ್ಕೆ ಧನ್ಯವಾದಗಳು. ಜುಲಿಯ ಅವರಿಗೆ ಒಳ್ಳೆಯದಾಗಲಿ" ಎಂದಿದ್ದಾರೆ. ಈ ನೃತ್ಯ ನೋಡಿದರೆ ನಿಮಗೆ ಏನನಿಸುತ್ತದೆ?! (ಏಜೆನ್ಸೀಸ್)