ನ್ಯೂಸ್

ಯಲಗೂರು ಚೆಕ್‌ಪೋಸ್ಟ್‌ನಲ್ಲಿ 9.95 ಲಕ್ಷ ರೂ. ವಶ

ವಿಜಯಪುರ : ಜಿಲ್ಲೆಯ ನಿಡಗುಂದಿ ಪಟ್ಟಣದ ಯಲಗೂರು ಕ್ರಾಸ್ ಚೆಕ್‌ಪೋಸ್ಟ್ ಬಳಿ ಮಂಗಳವಾರ ಸರ್ಕಾರಿ ಬಸ್ ತಪಾಸಣೆ ನಡೆಸುತ್ತಿದ್ದಾಗ ಪ್ರಯಾಣಿಕನೊಬ್ಬನ ಬಳಿ 9.95 ಲಕ್ಷ ರೂ.ಗಳು ಪತ್ತೆಯಾಗಿದ್ದು, ಸೂಕ್ತ ದಾಖಲಾತಿಗಳು ಇಲ್ಲದಿರುವುದರಿಂದ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಹೊಸಪೇಟೆ ಕಡೆಯಿಂದ ವಿಜಯಪುರದ ಕಡೆ ಬಸ್ ತೆರಳುತ್ತಿದ್ದಾಗ ಯಲಗೂರು ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಕೂಡಗಿ ನಿವಾಸಿ ನೂರ್‌ಖಾನ್ ದಫೇದಾರ್ ಎಂಬಾತನ ಬಳಿ ಹಣ ಪತ್ತೆಯಾಗಿದೆ.

ಈರುಳ್ಳಿ ಮಾರಾಟ ಮಾಡಿ ಬಂದ ಹಣ ಎಂದು ಆತ ಹೇಳಿದ್ದು, ದಾಖಲೆ ನೀಡಿ, ಹಣ ಹಿಂಪಡೆಯುವಂತೆ ನಿಡಗುಂದಿ ತಹಸೀಲ್ದಾರ್ ಕಿರಣಕುಮಾರ್ ಕುಲಕರ್ಣಿ ತಿಳಿಸಿದ್ದಾರೆ.