ಬೆಂಗಳೂರು: ಖಾಸಗಿ ಕಂಪನಿ ಇ-ಮೇಲ್ ಹ್ಯಾಕ್ ಮಾಡಿ, ಅವರ ಹೆಸರಿನಲ್ಲಿ 86.56 ಲಕ್ಷ ರೂ. ಮೌಲ್ಯದ ಇ-ಗ್‌ಟಿ ಕಾರ್ಡ್ ಖರೀದಿಸಿ ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.
ಎಸ್ಸಿಲೋರ್ ಇಂಡಿಯಾ ಪ್ರೈ. ಲಿ. ಕಂಪನಿ ಉಪ ಆಡಳಿತ ವ್ಯವಸ್ಥಾಪಕ ಎಸ್.ಡಿ. ದೀಪಕ್, ಈ ಕುರಿತು ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅ.22ರಂದು ಅಪರಿಚಿತ ವ್ಯಕ್ತಿ, ಎಸ್ಸಿಲೋರ್ ಕಂಪನಿಯ ಅಪರ್ಣಾ ಎಂಬುವರರ ಇ-ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಅನಧಿಕೃತವಾಗಿ ಕಂಪನಿಯ ಹಳೆಯ ಇನ್‌ವಾಯ್ಸ ಮಾಹಿತಿಯನ್ನು ಕದ್ದಿದ್ದಾರೆ. ಬಳಿಕ ಇ-ಗ್‌ಟಿ ಕಾರ್ಡ್ ಸಂಬಂಧಿಸಿದಂತೆ 93.30 ಲಕ್ಷ ರೂ. ಮೊತ್ತದ ನಕಲಿ ಪರ್ಚೇಸ್ ಆರ್ಡರ್ಸ್ ಸೃಷ್ಟಿಸಿ ಪಿನ್ ಲ್ಯಾಬ್ ಕಂಪನಿಗೆ ಇಮೇಲ್ ಕಳುಹಿಸಿದ್ದಾರೆ.
ವಾಪಸ್ 86.56 ಲಕ್ಷ ರೂ. ಮೌಲ್ಯದ ಇ-ಗ್‌ಟಿ ಕಾರ್ಡ್, ಅಪರ್ಣಾ ಇಮೇಲ್‌ಗೆ ಆಕ್ಟಿವೇಷನ್ ಕೋಡ್ ಬಂದಿದೆ. ಇದನ್ನು ದುರ್ಬಳಕ್ಕೆ ಮಾಡಿಕೊಂಡು ಸೈಬರ್ ವಂಚಕರು ಬೇರೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಕಡಿತವಾದ ಮಾಹಿತಿ ತಿಳಿದ ಎಸ್ಸಿಲೋರ್ ಕಂಪನಿ ಅಧಿಕಾರಿಗಳು, ಪಿನ್ ಲ್ಯಾಬ್ ಕಂಪನಿಗೆ ಪ್ರಶ್ನಿಸಿದಾಗ ಇಮೇಲ್ ಮೂಲಕ ಆರ್ಡರ್ ಬಂದಿದ್ದು, ವಾಪಸ್ ಆಕ್ಟಿವೇಷನ್ ಕೋಡ್ ಕಳುಹಿಸಿರುವುದಾಗಿ ಉತ್ತರಿಸಿದ್ದಾರೆ.
ಆಗ ಸೈಬರ್ ವಂಚಕರು ಅಪರ್ಣಾ ಇಮೇಲ್ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ದೀಪಕ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.