ನ್ಯೂಸ್

57 ವರ್ಷದ ವ್ಯಕ್ತಿಯೊಬ್ಬ 2 ಮಕ್ಕಳ ತಾಯಿ 80 ವರ್ಷದ ಅಜ್ಜಿಯನ್ನು ಮದುವೆಯಾದ; ಮುಂದೆ ಆಗಿದ್ದೇ ಬೇರೆ....

ನವದೆಹಲಿ:  ​​ಪ್ರೀತಿಗೆ ವಯಸ್ಸು, ಜಾತಿ, ಧರ್ಮವಿಲ್ಲ. ಪ್ರೀತಿಗೆ ಬಡವ ಶ್ರೀಮಂತ ಎಂಬ ಭೇದ ಕಾಣುವುದಿಲ್ಲ. ಅನೇಕರು ತಮಗಿಂತ ದೊಡ್ಡ ವಯಸ್ಸಿನವರನ್ನು ಪ್ರೀತಿಸಿ ಮದುವೆಯಾಗುವವರಿದ್ದಾರೆ.  ಹೀಗೆ ಇಲ್ಲೊಂದು ವಿಚಿತ್ರ  ಪ್ರೇಮವೊಂದು ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬಂದಿದೆ.  

57 ವರ್ಷದ ವ್ಯಕ್ತಿಯೊಬ್ಬ ತನಗಿಂತ 23 ವರ್ಷ ದೊಡ್ಡವಳಾದ ಅಂದರೆ 80 ವರ್ಷದ ಮಹಿಳೆಯನ್ನು ಪ್ರೀತಿಸುತ್ತಿದ್ದ. ಪುರುಷನ ಹೆಸರು ಡೇವಿಡ್ ಫೌಟ್ ಮತ್ತು ಮಹಿಳೆಯ ಹೆಸರು ಕ್ಯಾರೊಲಿನ್ ಹಾಲೆಂಡ್. ಆಕೆಗೆ 80 ವರ್ಷ. ಇವರಿಬ್ಬರೂ ಮದುವೆ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಕ್ಯಾಲಿಫೋರ್ನಿಯಾದ 57 ವರ್ಷದ ನಿವಾಸಿ ಡೇವಿಡ್ ಸ್ವಂತ ಮನೆ ಹೊಂದಿಲ್ಲ. ಕಾಯಂ ಕೆಲಸವಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಉದ್ಯಾನವನದಲ್ಲಿ ಜೀವನ ಕಳೆಯುತ್ತಿದ್ದನು.  ಕೆಲವು ದಿನಗಳ ಹಿಂದೆ ಡೇವಿಡ್ 80 ವರ್ಷದ ಕ್ಯಾರೋಲಿನ್ ಪರಿಚಯವಾಯ್ತು, ನಂತ್ರ ಪ್ರೀತಿಯಲ್ಲಿ ಬಿದ್ದು, ಇಬ್ಬರೂ ಮದುವೆಯಾದರು.  ಮದುವೆಯಾದ ಕೆಲವು ದಿನಗಳ  ನಂತರ ಕ್ಯಾರೋಲಿನ್ ಸಾವನ್ನಪ್ಪಿದಳು. ಮಹಿಳೆ ಸಾವನ್ನಪ್ಪುತ್ತಿದ್ದಂತೆ ಈಕೆ ಮಕ್ಕಳು ಡೇವಿಡ್ ಫೌಟ್ ಮೆಲೆ ವಂಚನೆ ಆರೋಪ ಮಾಡಿದ್ದಾರೆ.

ನಮ್ಮ ತಾಯಿ ಕ್ಯಾರೋಲಿನ್ ಬಹಳಷ್ಟು ಹಣವನ್ನು ಹೊಂದಿರುವ ಮಹಿಳೆ. ನಾವು ಇಬ್ಬರು ಹೆಣ್ಣು ಮಕ್ಕಳು. ಡೇವಿಡ್ ತಮ್ಮ ತಾಯಿಗೆ ಆಮಿಷ ಒಡ್ಡಿ ಹಣ ಲಪಟಾಯಿಸಿದ್ದರು ಎಂದೂ ಆರೋಪಿಸಲಾಗಿದೆ.

5 ಕೋಟಿ ಮೌಲ್ಯದ ಆಸ್ತಿಯನ್ನು ಮಾರಿ ಡೇವಿಡ್‌ಗೆ ಸಂಪೂರ್ಣ ಹಣವನ್ನು ನೀಡುವುದಾಗಿ ಕ್ಯಾರೊಲಿನ್ ಭರವಸೆ ನೀಡಿದ್ದರು.ತಾಯಿಯ ಮರಣದ ನಂತರ, ಅವರ ಆಸ್ತಿಯ ಹಕ್ಕು ಅವರ ಇಬ್ಬರು ಹೆಣ್ಣುಮಕ್ಕಳಿಗೆ ವರ್ಗಾಯಿಸಲಾಯಿತು. ಇದಲ್ಲದೆ, ಅವರು ತಮ್ಮ ತಾಯಿಯ ಆಸ್ತಿಯಲ್ಲಿ ಒಂದು ಪೈಸೆಯನ್ನು ನೀಡಿಲ್ಲ. ಈಗ ಡೇವಿಡ್ ಮತ್ತೆ ನಿರಾಶ್ರಿತರಾಗಿದ್ದಾರೆ. ತನ್ನ ಹಳೆಯ ಜೀವನವನ್ನು ನಡೆಸುತ್ತಿದ್ದಾನೆ.