ನ್ಯೂಸ್

ತಂದೆ ಮಾರಾಟಕ್ಕಿದ್ದಾರೆ!; 2 ಲಕ್ಷ ರೂ.ಗೆ ಅಪ್ಪನನ್ನು ಮಾರಲು ಸಿದ್ಧವಾದ ಮಗಳು!

ನವದೆಹಲಿ:  ಹೆಣ್ಣು ಮಕ್ಕಳಿಗೆ ತಂದೆ ಎಂದರೆ ಅಪಾರವಾದ ಪ್ರೀತಿ ಇರುತ್ತದೆ. ಮಕ್ಕಳು ಮಾಡುವ ಚೇಷ್ಟೆಯ ಕೆಲಸಗಳು ಕೆಲವೊಮ್ಮೆ ನಮ್ಮನ್ನು ನಗಿಸುತ್ತದೆ. ಆದರೆ ಇಲ್ಲೊಬ್ಬಳು ಮಗಳು ಅಪ್ಪನ ಮೇಲೆ ಇರುವ ಸಿಟ್ಟಿಗೆ ಅವರನ್ನೇ ಮರಾಟ ಮಾಡಲು ಸಿದ್ಧವಾಗಿದ್ದಾಳೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗಿದೆ.

ತಂದೆ ಜತೆಗೆ 8 ವರ್ಷದ ಮಗಳಿಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಆ ಮಗಳು ತೆಗೆದುಕೊಂಡ ಸೇಡು ಓದಿದರೆ ನಗು ಬರುತ್ತದೆ. "ಫಾದರ್ ಆನ್ ಸೇಲ್" ಎಂದು ಬರೆದು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಳು. ಅಷ್ಟೇ.. ತಂದೆಯನ್ನು 2 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಈ ಪೋಸ್ಟ್​​ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಈ ಟಿಪ್ಪಣಿ ನೋಡಿದ ನಂತರ ನಿಮ್ಮ ಮಗು ನಿನ್ನನ್ನು ತುಂಬಾ ಪ್ರೀತಿಸುತ್ತಿದೆ. ಮಕ್ಕಳ ಅರಿವಿಲ್ಲದ ಚೇಷ್ಟೆಗಳು ಕೆಲವೊಮ್ಮೆ ಮನರಂಜನೆ ನೀಡುತ್ತವೆ. ಆದರೆ ನಿಮ್ಮ ತಂದೆಯೊಂದಿಗೆ ಜಗಳವಾಡಿದರೆ, ಈ ತಮಾಷೆಯಾಗಿ ಸೇಡು ತೀರಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.