ನ್ಯೂಸ್

8 ಟಿಪ್ಪರ್ ಅಕ್ರಮ ಮರಳು ವಶಕ್ಕೆ

ಬಸವರಾಜ ವೀರಪ್ಪ ಗರಗ

ಜೊಯಿಡಾ: ತಾಲೂಕಿನ ಕಾಮರಾ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 8 ಟಿಪ್ಪರ್‌ನಷ್ಟು ಮರಳನ್ನು ತಹಸೀಲ್ದಾರ್ ಹಾಗೂ ತಂಡ ವಶಕ್ಕೆ ಪಡೆದಿದೆ.
ತಾಲೂಕಿನ ಅಸು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮರಾ ಗ್ರಾಮದಲ್ಲಿ ಎರಡು ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 8 ಟಿಪ್ಪರ್‌ನಷ್ಟು ಮರಳನ್ನು ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಸಹಾಯದೊಂದಿಗೆ ಜಪ್ತ ಮಾಡಲಾಗಿದೆ.
ಜೊಯಿಡಾ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ರಾಮನಗರ ಪಿಎಸ್‌ಐ ಕೃಷ್ಣಕಾಂತ ಪಾಟೀಲ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.