ಇಂಡಿಯಾನಾ: ಅಮೆರಿಕದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ಇಂಡಿಯಾನಾ ರಾಜ್ಯದ ಇಂಡಿಯಾನಾಪೊಲೀಸ್ ನಗರದ ಫೆಡೆಕ್ಸ್ ಎಂಬ ಸ್ಥಳದಲ್ಲಿ ಆಗಂತುಕನೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಗೆ ಆರು ಮಹಿಳೆಯರು ಸೇರಿದಂತೆ 8 ಜನ ಮೃತಪಟ್ಟು ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಗುಂಡಿನ ದಾಳಿ ನಡೆಸಿದ ವ್ಯಕ್ತಿ ಕಡೆಗೆ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಇಂಡಿಯಾನಾ ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ.
ಕಳೆದ ತಿಂಗಳ ಕೊನೆ ವಾರದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದರು.
ಕೊಲೊರಾಡೊದಲ್ಲಿ ಮಾರ್ಚ್ 21 ರಂದು ನಡೆದಿದ್ದ ಭೀಕರ ಗುಂಡಿನ ದಾಳಿಯಲ್ಲಿ 10 ಜನ ಮೃತಪಟ್ಟಿದ್ದರು.