ಕೋಲಾರ ನಗರಸಭೆಯಿಂದ ಹಮ್ಮಿಕೊಂಡಿರುವ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಇಚೆಗೆ ಚಾಲನೆ ನೀಡಿದರು.  
ನ್ಯೂಸ್

19 ಪಾರ್ಕ್​ ಅಭಿವೃದ್ಧಿಗೆ 8 ಕೋಟಿ ಮೀಸಲು

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದಲ್ಲಿನ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಕೋಲಾರ ನಗರಸಭೆಯು ಅ.2ರವರೆಗೂ ಸ್ವಚ್ಛತಾ ಹಿ ಸೇವಾ ಆಂದೋಲನ ಕೈಗೊಂಡಿದ್ದು, ಒಟ್ಟು 19 ಉದ್ಯಾನವನಗಳ ಪ್ರಗತಿಗೆ 8 ಕೋಟಿ ರೂ. ಮೀಸಲಿಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು 56 ಪಾರ್ಕ್​ಗಳಿದ್ದು, ನಗರ ವ್ಯಾಪ್ತಿಯಲ್ಲಿ ಒಟ್ಟು 19 ಪಾರ್ಕ್​ಗಳಿವೆ. ಅವುಗಳಿಗೆ ಕಾಯಕಲ್ಪ ಕಲ್ಪಿಸಲು ಯೋಜನೆ ರೂಪಿಸಿದ್ದು, ಅಭಿವೃದ್ಧಿಗೆ ಮುಂದಾಗಿದೆ.

ಪ್ರತಿ ಭಾನುವಾರ ನಗರದ ಎಲ್ಲ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸುವುದು. 15ನೇ ಹಣಕಾಸು ಯೋಜನೆಯಡಿ ಅಮೃತ್​ ನಗರೋತ್ಥಾನ ಯೋಜನೆಯಡಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಇದೇ ರೀತಿ ಜಿಲ್ಲೆಯ ಕೆಜಿಎ್​ ನಗರಸಭೆಯಿಂದಲೂ ಕ್ರಮವಹಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಸುಮಾರು ದಶಕಗಳೇ ಪೂರೈಸಿದ ಸರ್ವಜ್ಞ ಪಾರ್ಕ್​, ಅಂಬೇಡ್ಕರ್​ ಪಾರ್ಕ್​, ಕುವೆಂಪು ಪಾರ್ಕ್​, ಚಿಕ್ಕನಂಜಪ್ಪ ಪಾರ್ಕ್​ ಸೇರಿ 19 ಉದ್ಯಾನವನಗಳಿಗೆ. ಅವುಗಳಲ್ಲಿ ಕೆಲವು ಅಳಿವಿನಂಚಿನಲ್ಲಿದ್ದು, ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಇನ್ನು ಕೆಲವು ಸಮರ್ಪಕವಾಗಿ ನಿರ್ವಹಣೆಯಿಲ್ಲದೆ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ.

ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ವಿವಿಧ ಯೋಜನೆಗಳಡಿ ಪಾರ್ಕ್​ಗಳಲ್ಲಿ ಅಳವಡಿಸಲಾಗಿರುವ ಜಿಮ್​ ಸಾಮಗ್ರಿಗಳು, ಕಾರಂಜಿ, ಅಲಂಕಾರಿಕ ಸಸಿಗಳು, ಕುರ್ಚಿಗಳು ಹಾನಿಯಾಗಿವೆ. ಬಿಡಿ ಭದ್ರತೆಯಿಲ್ಲದೆ ಇರುವುದರಿಂದ ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ.

ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಕಳೆದ ಭಾನುವಾರ ಭೇಟಿ ನೀಡಿ ನಗರ ಪ್ರದಣೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳೆ ಪಾರ್ಕ್​ಗಳ ಅವ್ಯವಸ್ಥೆ ಬೆಳಕಿಗೆ ಬಂದಿತ್ತು. ಜತೆಗೆ ಸಾರ್ವಜನಿಕರು ಸಹ ಪಾರ್ಕ್​ಗಳ ಸ್ಥಿತಿಗತಿಗಳ ಬಗ್ಗೆ ಗಮನಕ್ಕೆ ತಂದು ಸೌಲಭ್ಯ ಕಲ್ಪಿಸಿಕೊಡಲು ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ವಚ್ಛತಾ ಹಿ ಸೇವಾ ಆಂದೋಲನದಡಿ ಸ್ವಚ್ಛತೆ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ.

* ಸರ್ವಜ್ಞ ಪಾರ್ಕ್​ ಅಭಿವೃದ್ಧಿಗೆ ಒತ್ತಾಯ

ನಗರದಲ್ಲಿರುವ ಪಾರ್ಕ್​ಗಳ ಪೈಕಿ ಸರ್ವಜ್ಞ ಪಾರ್ಕ್​ ಸುಮಾರು 85 ವರ್ಷ ಹಳೆಯದಾಗಿದೆ. ಇದರಲ್ಲಿ ರೇಡಿಯೋ ಕಿಯೋಸ್ಕ್​, ಬ್ಯಾಂಡ್​ ಸ್ಟಾಂಡ್​, ಕಾರಂಜಿ ಹೀಗೆ ಗಮನ ಸೆಳೆಯುವ ಆಕರ್ಷಗಳಿವೆ. ಅವೆಲ್ಲ ಈಗ ನಿರ್ವಹಣೆಯಿಲ್ಲದೇ ಹಾನಿಯಾಗಿದ್ದು, ದುರಸ್ತಿಪಡಿಸಿ ಜನರ ಅನುಕೂಲಕ್ಕೆ ಅನುವು ಮಾಡಿಕೊಡಲು ನಗರಸಭೆ ಕಾಮಗಾರಿ ಕೈಗೆತ್ತಿಕೊಂಡಿದೆ.

* ಹಸರೀಕರಣಕ್ಕಾಗಿ ಸಸಿ ನಾಟಿ

ಸ್ವಚ್ಛತಾ ಹಿ ಸೇವಾ ಅಭಿಯಾನದ ನೆನಪಿಗಾಗಿ ಎಲ್ಲ ಉದ್ಯಾನಗಳಲ್ಲಿ ಸಸಿ ನೆಟ್ಟು, ಮಕ್ಕಳಿಗೆ, ವೃದ್ಧರಿಗೆ, ಸಮಾನ ಮನಸ್ಕರಿಗೆ ಉದ್ಯಾನವನಗಳನ್ನ ಹಸಿರಾಗಿಸಿ ಸುಂದರ ಮಾಡಲು ನಿರ್ಧರಿಸಿ ಆಂದೋಲನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಪಾರ್ಕ್​ಗಳಿಗೆ ಭೇಟಿ ನೀಡುವ ಸಾರ್ವಜನಿಕರು ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ವಾಕಿಂಗ್​ ಪಾಥ್​, ಕಾರಂಜಿಗಳು ಹಾಗೂ ವಿದ್ಯುತ್​ ದೀಪಗಳನ್ನು ಸರಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕ ಹಾಗೆ ಪಾರ್ಕ್​ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

* ನಿರ್ವಹಣೆಗೆ ಸಿಬ್ಬಂದಿ ರ್ನಿಲಕ್ಷ$್ಯ

ಉದ್ಯಾನವನಗಳ ನಿರ್ವಹಣೆಗಾಗಿ ನಗರಸಭೆಯಿಂದ ಸಿಬ್ಬಂದಿ ನಿಯೋಜಿಸಲಾಗಿದೆ. ಅವರು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಬಹುತೇಕ ಪಾರ್ಕ್​ಗಳು ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ. ಸಿಬ್ಬಂದಿ ಬೆಳಗ್ಗೆ ಮಾತ್ರ ಪಾರ್ಕ್​ಗಳಿಗೆ ಭೇಟಿ ನೀಡಿ ಸ್ವಚ್ಛಗೊಳಿಸುತ್ತಾರೆ, ಈಗಾಗಲೇ ನಾಟಿ ಮಾಡಲಾಗಿರುವ ಗಿಡಗಳಿಗೆ ನೀರು ಸಹ ಹಾಕುವುದಿಲ್ಲ. ಬಿಡಾಡಿ ಹಸುಗಳು ಒಳಗೆ ನುಗ್ಗದಂತೆ ಬಂದೋಬಸ್ತ್​ ಸಹ ಮಾಡಿಲ್ಲ.

ಕೋಟ್​...

ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ವಚ್ಚತಾ ಹಿ ಸೇವಾ ಆಂದೋಲನ ಹಮ್ಮಿಕೊಂಡಿದ್ದು, ಅ.2ರತನಕ ನಡೆಸಲಾಗುವುದು. ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು.

- ನವೀನ್​ ಚಂದ್ರ, ಪೌರಾಯುಕ್ತ, ಕೋಲಾರ ನಗರಸಭೆ

ಕೋಟ್​...

ಪಾರ್ಕ್​ಗಳಲ್ಲಿ ಅಳವಡಿಸಲಾಗಿರುವ ಜಿಮ್​ ಉಪಕರಣಗಳು ಹಾಳಾಗಿವೆ. ಗುಣಮಟ್ಟದ ಉಪಕರಣಗಳನ್ನು ಅಳವಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. ಉತ್ತಮ ವಾತಾವರಣವುಳ್ಳ ಪಾರ್ಕ್​ಗಳನ್ನಾಗಿ ನಿರ್ಮಿಸಲು ನಗರಸಭೆ ಮುಂದಾಗಬೇಕು.

- ರಾಜೇಶ್​ ಸಿಂಗ್​, ಗೌರಿಪೇಟೆ ನಿವಾಸಿ, ಕೋಲಾರ