ನ್ಯೂಸ್

ತಲೆ ಬೋಳಿಸಿದವರ ಬಂಧನ

Vijyapura - Shashikant Mendegar

ವಿಜಯಪುರ: ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಇಬ್ವರು ಯುವಕರ ತಲೆ ಬೋಳಿಸಿ, ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ವಿಜಯಪುರ ತಾಲೂಕಿನ ಹೆಗಡಿಹಾಳ ತಾಂಡಾದಲ್ಲಿ ನಿನ್ನೆ ಈ ಘಟನೆ ನಡೆದಿತ್ತು. ದುಡಿಯಲು ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ತಮ್ನದೇ ತಾಂಡಾದ ಮಹಿಳೆ ಜತೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿದ್ದರು. ಈ ವಿಷಯವನ್ನು ಮಹಿಳೆ ತಮ್ಮ ಹೆಗಡಿಹಾಳ ತಾಂಡಾದವರ ಬಳಿ ಹೇಳಿಕೊಂಡಿದ್ದಳು. ಈ ಸಂಬಂಧ ಗ್ರಾಮದ ಹಿರಿಯರು ಆ ಇಬ್ಬರು ಯುವಕರನ್ನು ಮಹಾರಾಷ್ಟ್ರ ದಿಂದ ಹೆಗಡಿಹಾಳ ತಾಂಡಾಕ್ಕೆ ಕರೆಯಿಸಿಕೊಂಡು ಪಂಚಾಯಿತಿ ನಡೆಸಿ ಇಬ್ಬರು ಯುವಕರಿಗೆ ತಲೆ ಬೋಳಿಸಿ, ಚಪ್ಪಲಿ ಹಾಕಿ ಮೆರವಣಿಗೆ ನಡೆಸುವ ತೀರ್ಪು ನೀಡಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಗ್ರಾಮೀಣ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ನಂತರ ಏಳು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.‌