ನವದೆಹಲಿ: ( indian army veteran ) ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಮಹಿಳಾ ಸೇನಾ ಯೋಧೆಯೊಬ್ಬರು ಈಗ ತಮ್ಮ 79 ವರ್ಷದಲ್ಲಿ ರಸ್ತೆಬದಿಯ ಆಹಾರ ಅಂಗಡಿಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ವೃದ್ಧೆ ಈ ಇಳಿ ವಯಸ್ಸಿನಲ್ಲಿಯೂ ಸ್ವಾವಲಂಬಿ ಜೀವನ ನಡೆಸುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
ಭಾರತೀಯ ಸೇನೆಯಲ್ಲಿ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಪಟ್ಟಿ, ಸೇನಾ ನಿವೃತ್ತಿಯ ನಂತರ ಪ್ರಸ್ತುತ ಇಂದೋರ್‌ನ ರಸ್ತೆಬದಿಯಲ್ಲಿ ಇಡ್ಲಿ ಸಾಂಬಾರ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವಿವಾಹಿತೆಯಾಗಿರುವ ಪಟ್ಟಿ ಒಬ್ಬಂಟಿಯಾಗಿ ವಾಸಿಸುತ್ತಾಳೆ. ತನ್ನ ಸಕಾರಾತ್ಮಕ ಮನೋಭಾವ, ಎಂದಿಗೂ ಬಿಟ್ಟುಕೊಡದ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಎಲ್ಲರ ಹೃದಯಗಳನ್ನು ಗೆದ್ದಿದ್ದಾಳೆ.
ಆಹಾರ ವಿಮರ್ಶಕ ಕಾಶಿಶ್ ಸೋನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೃದ್ಧ ಮಹಿಳೆಯ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಪಟ್ಟಿ ಮಾತನಾಡಿ, “ನಾನು ಸ್ವಾಭಿಮಾನಿ, ಅವಿವಾಹಿತ ಮಹಿಳೆ, ಮುಂಬೈನಲ್ಲಿ ಪದವಿ ಪೂರ್ಣಗೊಳಿಸಿದೆ ಮತ್ತು ಹಿಂದೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದೆ. ನಿವೃತ್ತಿಯ ನಂತರ, ಅಡುಗೆಯನ್ನು ಹವ್ಯಾಸವಾಗಿ ಪ್ರಾರಂಭಿಸಿ ಮತ್ತು ನಂತರ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಿಕೊಂಡೆ, ಇಂದು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
2025 ಜೂನ್ 22ರಂದು ಹಂಚಿಕೊಳ್ಳಲಾದ ಈ ವೀಡಿಯೊವನ್ನು 5.2 ಮಿಲಿಯನ್ ವೀಕ್ಷಣೆಗಳು ಮತ್ತು ಹಲವು ಕಾಮೆಂಟ್‌ಗಳು ಬಂದಿವೆ. ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಜೀವನ ಮುಗಿದುಹೋಯಿತು ಎಂದು ಬೇಸರಗೊಳ್ಳುವವರಿದ್ದಾರೆ, ಮತ್ತೊಂದೆಡೆ, ಬಲಿಷ್ಠರಾಗಿದ್ದರೂ ಕೆಲಸ ಮಾಡಲು ಆಸಕ್ತಿ ಇಲ್ಲದವರೂ ಇದ್ದಾರೆ. ಅಂತಹ ವೃದ್ಧೆಯೊಬ್ಬಳ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಶೇಷವಾಗಿ ಅನೇಕ ಜನರು ಅವರ ಪೋಸ್ಟ್ ತಮಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದ್ದಾರೆ.