ನ್ಯೂಸ್

76ನೇ ಎನ್‌ಸಿಸಿ ದಿನ

4ಕೆಎಆರ್ ವಾಯುದಳ ಎನ್‌ಸಿಸಿ ಮೈಸೂರು ವಿಭಾಗದ ಸಹಯೋಗದಲ್ಲಿ ಈ ಹಿಂದಿನ ಕೆಡೆಟ್‌ಗಳು ನ.24ರಂದು ನಗರದಲ್ಲಿ 76ನೇ ಎನ್‌ಸಿಸಿ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಮಾಜಿ ಕೆಡೆಟ್‌ಗಳ ಸಂಘದ ಅಧ್ಯಕ್ಷ ಡಾ. ಅನಿಲ್ ಥಾಮಸ್ ತಿಳಿಸಿದರು.

ಎನ್‌ಸಿಸಿ ದಿನ ಅಂಗವಾಗಿ ಅಂದು ಬೆಳಗ್ಗೆ 7.30ಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮೋಟಾರ್ ರ‌್ಯಾಲಿ ಹೊರಡಲಿದೆ. ಇದರಲ್ಲಿ ಸುಮಾರು ನೂರು ಮಂದಿ ಮೋಟಾರ್ ಬೈಕ್, ಕಾರುಗಳೊಡನೆ ಪಾಲ್ಗೊಳ್ಳಲಿದ್ದು, ಇದರಲ್ಲಿನ ಎನ್‌ಸಿಸಿ ವಾಹನಗಳೂ ಇರಲಿವೆ. ರ‌್ಯಾಲಿಯು ಮೆಟ್ರೋಪೋಲ್ ವೃತ್ತದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿ ತಲುಪಿ ಸೆಲ್ಯೂಟ್ ಮಾಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳಿಕ, ನಗರದ ಹೋಟೆಲ್ ಸದರ್ನ್ ಸ್ಟಾರ್‌ನಲ್ಲಿ ಬೆಳಗ್ಗೆ 10.30ಕ್ಕೆ ವಿಶೇಷ ಕಾರ್ಯಕ್ರಮವಿದ್ದು, ಕರ್ನಲ್ ರೋಹಿತ್ ಥಾಕುರ್, ವಿಂಗ್ ಕಮಾಂಡರ್ ಆಶೀಶ್, ಆಲ್ಫಾಲೀಡ್ ಸಂಸ್ಥೆಯ ನಾಗರಾಲ್, ನಿವೃತ್ತ ರೋರೋ ಮಾಡೆಲಿಂಗ್ ಬೋಧಕರಾದ ಸೋಮೇಂದ್ರಸಿಂಗ್, ನಗರದ ಮೊದಲ ಮಹಿಳಾ ಫೈಟರ್ ಪೈಲಟ್ ಪುಣ್ಯಾ ನಂಜಪ್ಪ ಮೊದಲದವರು ಪಾಲ್ಗೊಳ್ಳಲಿದ್ದು, ಇವರುಗಳು ರಕ್ಷಣಾ ದಳ ಸೇರಿದಂತೆ ಮೊದಲಾದ ಕಡೆ ಎನ್‌ಸಿಸಿ ಕೆಡೆಟ್‌ಗಳಿಗೆ ಇರುವ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

ಮಾಜಿ ಕೆಡೆಟ್‌ಗಳ ಸಂಘದ ಪದಾಧಿಕಾರಿಗಳಾದ ಉಮಾ ವೆಂಕಟೇಶ್, ಶಂಕರ್ ದನಗೌಡ, ಕೆ.ಪಿ. ಲಕ್ಷ್ಮೀ ವಲ್ಲಭ ಇದ್ದರು.