ಕೋಲಾರ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಭಾನುವಾರ 76ನೇ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಧ್ವಜಾರೋಹಣ ನೆರವೇರಿಸಿ, ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ತೆರೆದ ಜೀಪಿನಲ್ಲಿ ಸಾಗಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪರೇಡ್ ಪರಿವೀಕ್ಷಣೆ ನಡೆಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಡಿಎಆರ್ ಪೊಲೀಸ್, ನಾಗರಿಕ ಪೊಲೀಸ್, ಮಹಿಳಾ ಪೊಲೀಸ್, ಗೃಹ ರಕ್ಷಕ ದಳ, ಪ್ರವಾಸಿ ಮಿತ್ರರು, ಬಾಲಕರ ಸರ್ಕಾರಿ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳ ತಂಡ, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್, ಭಾರತ ಸೇವಾದಳ ಸೇರಿ ವಿವಿಧ ಶಾಲಾ&ಕಾಲೇಜು ವಿದ್ಯಾರ್ಥಿಗಳ ತಂಡದವರು ಆಕರ್ಷಕ ಪಥಸಂಚನ ನಡೆಸಿದರು. ಪರೇಡ್ನಲ್ಲಿ 15 ಸಮವಸ, 10 ಶಾಲಾ ಮಕ್ಕಳ ತಂಡಗಳು, 2 ವಾದ್ಯವೃಂದ ಸೇರಿ 27 ತಂಡಗಳು ಭಾಗವಹಿಸಿದ್ದವು.
ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದು, ಆಕರ್ಷಣೀಯವಾಗಿತ್ತು. ಇದೇ ವೇಳೆ ಜಿಲ್ಲೆಯ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಅಂಗಾಗ ದಾನ ಮಾಡಿದ ದಾನಿಗಳಿಗೆ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಪುರಸ್ಕಾರ: ಸ್ಕೌಟ್ ಮತ್ತು ಗೈಡ್ ಪುರಸ್ಕಾರ: ಆಲೀಸಾ, ಚೈತನ್ಯ, ಭವಿಷ್, ಧನುಷ್ ರೆಡ್ಡಿ, ಶಿರಿಷ್ ಅತ್ರೇಯ, ರೋಹನ್, ಸರಿತಾ ಹಂಸವೇಣಿ, ಚಾಣಾಕ್ಷ ಗೌಡ, ಕುಸುಮಾ. ಕ್ರೀಡಾ ಸಾಧಕ ಪ್ರಶಸ್ತಿ: ಕೆಎಸ್ಆರ್ಟಿಸಿ ವಿಶೇಷ ಸಾಧನೆ: ಡಿ.ಗೀತಾ. ಎನ್ಸಿಸಿ ಪುರಸತರು: ಎ.ಬಾಲಾಜಿ, ಎನ್.ಜೇಶನ್ ಡ್ಯಾನಿಯಲ್, ಡಿ.ವಿ.ದಿನೇಶ್ವರನ್, ಮರಿಯಾ ಶರಣ್, ಅಬ್ದುಲ್ ಪರೀದ್, ಆನಂದ್ ರಾಜ್ಕುಮಾರ್, ಮರಿಯಾ ಸಿಂದಿಯಾ. ಅಂಗಾಂಗ ದಾನ ಮಾಡಿದವರು: ಸಂಜಯ್, ಜಿ.ಆನಂದ್, ಎ.ಮಂಜುಳಾ, ಕೆ.ಎಸ್.ನಾಗರಾಜ್, ಸಂದ್ಯಾ ಸ್ನೇಹ ಪ್ರಭು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಕುಡಾ ಅಧ್ಯಕ್ಷ ಮೊಹ್ಮದ್ ಹನ್ೀ, ನಗರಸಭೆ ಅಧ್ಯೆ ಲ್ಮದೇವಮ್ಮ, ಉಪಾಧ್ಯೆ ಸಂಗೀತ ಜಗದೀಶ್, ಡಿಸಿ ಡಾ.ಎಂ.ಆರ್.ರವಿ, ಜಿಪಂ ಸಿಇಒ ಪ್ರವಿಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಡಿಎಫ್ಒ ಸರೀನಾ ಸಿಕ್ಕಲಿಗರ್, ಎಡಿಸಿ ಮಂಗಳ, ಎಸಿ ಡಾ.ಮೈತ್ರಿ ಎಚ್.ಪಿ.ಎಸ್, ತಹಸೀಲ್ದಾರ್ ಡಾ.ನಯನ ಇದ್ದರು.
ಪ್ರಾಧಿಕಾರದ ಕಚೇರಿಯಲ್ಲಿಲ್ಲ ಆಚರಣೆ
ನಗರ ಸೇರಿ ಜಿಲ್ಲಾದ್ಯಂತ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದರೆ, ಕೋಲಾರ ಹೊರಲವಯದ ಎಪಿಎಂಸಿ ಸಮೀಪದಲ್ಲಿರುವ ರಾಜ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡದೆ, ಅಧಿಕಾರಿಗಳು ರ್ನಿಲಕ್ಷ$್ಯ ತೋರಿದ್ದಾರೆ. ಪ್ರಾಧಿಕಾರದ ಕಚೇರಿಯೂ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಯು ಬೆಂಗಳೂರಿನಲ್ಲಿ ವಾಸ ಇದ್ದಾರೆ. ಉಳಿದ ಸಿಬ್ಬಂದಿ ನಗರದಲ್ಲೇ ವಾಸವಿದ್ದರೂ ಸಹ ರಾಷ್ಟ್ರೀಯ ಹಬ್ಬ ಆಚರಣೆ ಮಾಡದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ 1 ತಿಂಗಳ ಮುಂಚೆಯೇ ಪೂರ್ವಭಾವಿ ಸಭೆಗಳನ್ನು ನಡೆಸಿ ಕಾರ್ಯಕ್ರಮ ಆಚರಣೆ ಕುರಿತು ರೂಪರೇಷಗಳನ್ನು ರೂಪಿಸಲಾಗಿತ್ತು.