ನ್ಯೂಸ್

ಮಲಿಯಾಳಿ ನರ್ಸ್​ಗಳಿಂದ 700 ಕೋಟಿ ರೂ. ವಂಚನೆ!​​ ಬ್ಯಾಂಕ್​ ಅಧಿಕಾರಿಗಳ​ ಆರೋಪ..

ಕುವೈತ್​​: ಭಾರತೀಯ ಪ್ರಜೆಗಳು ಅದರಲ್ಲಿ ಕೇರಳದ ನರ್ಸ್​ಗಳು(ದಾದಿಯರು)  ಬ್ಯಾಂಕ್​ಗಳಿಗೆ ವಂಚಿಸುತ್ತಿದ್ದಾರೆ ಎಂದು ಕುವೈತ್​ ಬ್ಯಾಂಕ್​ವೊಂದು ನೀಡಿದ ದೂರಿನ ಆರೋಪದ ಮೇಲೆ ಇಲ್ಲಿನ ಕೇರಳಲ್ಲಿ ಹತ್ತು ಮಂದಿ ಮೇಲೆ ದೂರು ದಾಖಲಾಗಿದೆ.

ಈ 10 ಪ್ರಕರಣಗಳಲ್ಲಿ ವಂಚಿಸಿದ ಮೊತ್ತವು 10.21 ಕೋಟಿ ರೂ. ಕುವೈತ್​ನ ಗಲ್ಫ್​ ಬ್ಯಾಂಕ್​ನಲ್ಲಿ ಸುಮಾರು 1,425 ಭಾರತೀಯರು 700 ಕೋಟಿ ರೂ. ವಂಚನೆ ಮಾಡಿದ್ದಾರೆ. ಅದರಲ್ಲೂ ಈ ಎಲ್ಲರೂ ಕೇರಳದವರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ವ್ಯಕ್ತಿಗಳು ಸಾಲ ಪಡೆದು ರಜೆ ಮೇಲೆ ಬೇರೆ ಬೇರೆ ದೇಶಗಳಿಗೆ ಹೋಗಿದ್ದಾರೆ. ಬಳಿಕ ಸಾಲ ಮರುಪಾತಿ ಮಾಡುವುದನ್ನು ನಿಲ್ಲಿಸಿದ್ದಾರೆ. ಅನೇಕರು ಕೆನಡಾ ಮತ್ತು ಯುರೋಪ್​ ದೇಶಗಳಿಗೆ ವಲಸೆ ಹೋಗಿದ್ದಾರೆ. ಮೊದಲಿನಲ್ಲಿ ಸಣ್ಣ ಮೊತ್ತದ ಸಾಲ ಪಡೆದು ಕಟ್ಟಿದ್ದಾರೆ. ಬಳಿಕ ನಂಬಿಕೆಯ ಆಧಾರದ ಮೇಲೆ ದೊಡ್ಡ ಮೊತ್ತದ ಹಣ(ಸಾಲ) ಪಡೆದಿದ್ದಾರೆ ಎಂದು ದೂರಿನಲ್ಲಿ ಬ್ಯಾಂಕ್​ ಹೇಳಿಕೊಂಡಿದೆ.

ಇನ್ನು ಸಾಲ ಮರುಪಾವತಿ ಆಗದಿರುವುದರ ಬಗ್ಗೆ ಬ್ಯಾಂಕ್​ ತನಿಖೆ ನಡೆಸಿದಾಗ ಹಲವು ಮಾಲಿಯಾಳಿ ನರ್ಸ್​ಗಳು ಬ್ಯಾಂಕ್​ಗೆ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಅಲ್ಲಿನ ಬ್ಯಾಂಕ್​ ಅಧಿಕಾರಿಳು ಕೇರಳಕ್ಕೆ ಭೇಟಿ ನೀಡಿ ದೂರು ಕೊಟ್ಟಿದ್ದಾರೆ.

ಕೇರಳದ ಪೊಲೀಸರು ಈ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದವರೆಲ್ಲಾ ಭಾರತೀಯ ಪ್ರಜೆಗಳ ಅಥವಾ ವಿದೇಶಿಯರಾ? ಎಂದು ಮೊದಲು ತಿಳಿಯಬೇಕು. ಅಲ್ಲದೆ, ಅವರ ಪಸ್ತುತ ಸ್ಥಳಗಳನ್ನು ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).