ನ್ಯೂಸ್

ಕೋಚಿಂಗ್ ಕ್ಲಾಸ್​ ಮುಗಿಸಿಕೊಂಡು ಹೋಗುತ್ತಿದ್ದ​ ವಿದ್ಯಾರ್ಥಿನಿಯರ ಮೇಲೆ ಹರಿದ ಬೊಲೆರೋ

ಬೆತಿಯಾ: ವೇಗವಾಗಿ ಬಂದ ಬೊಲೆರೋವೊಂದು ಸೈಕಲ್​ ಮೇಲೆ ತೆರಳುತ್ತಿದ್ದ ವಿದ್ಯಾರ್ಥಿನಿಯರಿಗೆ ಗುದ್ದಿದ ಘಟನೆ ಬಿಹಾರದ ಬೆತಿಯಾ ಎಂಬಲ್ಲಿ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಘಟನೆಯಲ್ಲಿ ಏಳು ವಿದ್ಯಾರ್ಥಿನಿಯರು ಸೇರಿದಂತೆ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 

ದೃಶ್ಯದಲ್ಲೇನಿದೆ?
10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಕೋಚಿಂಗ್​​ ಕ್ಲಾಸ್​ ಮುಗಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದರು. ಬೊಲೆರೋ ಚಾಲಕ ಮದುವೆ ಮೆರವಣಿಗೆ ಮುಗಿಸಿಕೊಂಡು ಹಿಂತಿರುಗುತ್ತಿದ್ದನು. ಈ ವೇಳೆ ಹಿಂದಿನಿಂದ ಬಂದ್​ ಬೊಲೆರೋ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ.

ಆಗ ಓರ್ವ ವಿದ್ಯಾರ್ಥಿನಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದನ್ನು ನೋಡಿದ ಡ್ರೈವರ್​, ಅಪಘಾತ ಸ್ಥಳದಿಂದ ಸುಮಾರು 20 ಅಡಿಗಳಷ್ಟು ಆಕೆಯನ್ನು ಎಳೆದೊಯ್ದಿದ್ದಾನೆ. ಅಪಘಾತದ ನಂತರ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.(ಏಜೆನ್ಸೀಸ್​)