ಸಾಂದರ್ಭಿಕ ಚಿತ್ರ 
ನ್ಯೂಸ್

7ನೇ ತರಗತಿ ವಿದ್ಯಾರ್ಥಿನಿಯನ್ನೇ ತಾಯಿ ಮಾಡಿದ ಸಹಪಾಠಿ! ರೇಪ್ ಮಾಡಿ ಬಾಂಗ್ಲಾಕ್ಕೆ ಹಾರಿದ ಆರೋಪಿ

Mandara

ಕೋಲ್ಕತ: ಏಳನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿಯೇ ರೇಪ್ ಮಾಡಿ ಆಕೆ ತಾಯಿಯಂತಾಗುವಂತೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆರೋಪಿ ಮತ್ತು ಆತನ ಕುಟುಂಬ ಬಾಂಗ್ಲಾದೇಶಕ್ಕೆ ಪರಾರಿಯಾಗಿರುವುದಾಗಿ ಹೇಳಲಾಗಿದೆ.

ಪಶ್ಚಿಮ ಬಂಗಾಳದ ನಾಡಿಯಾದ ಧಂತಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇತ್ತೀಚೆಗೆ 13 ವರ್ಷದ ಬಾಲಕಿಯು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಸಹಪಾಠಿಯಿಂದಲೇ ಆಕೆ ತಾಯಿಯಾಗಿರುವುದಾಗಿ ಹೇಳಲಾಗಿದೆ. ಆ ಬಾಲಕ ಈಕೆಗೆ ಹೆದರಿಸಿ ರೇಪ್ ಮಾಡಿದ್ದು, ಯಾರಿಗಾದರೂ ಹೇಳಿದರೆ ನಿನ್ನ ಅಶ್ಲೀಲ ಫೋಟೋಗಳನ್ನು ಎಲ್ಲರಿಗೂ ತೋರಿಸುವುದಾಗಿ ಹೆದರಿಸಿದ್ದ ಎನ್ನಲಾಗಿದೆ. ಈ ಕುರಿತು ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆರೋಪಿ ಸ್ಥಾನದಲ್ಲಿರುವ ಬಾಲಕನಿಗಾಗು ಹುಡುಕಾಡಿದಾಗ ಆತ ಮತ್ತು ಆತನ ಕುಟುಂಬ ಬಾಂಗ್ಲಾದೇಶಕ್ಕೆ ಪರಾರಿಯಾಗಿರುವುದು ತಿಳಿದುಬಂದಿದೆ. ಬಾಲಕನ ಅಜ್ಜ ಬಾಂಗ್ಲಾದಲ್ಲಿರುವುದಾಗಿ ಹೇಳಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)