ಬೆಂಗಳೂರು: ಆನ್‌ಲೈನ್ ಮೂಲಕ ಲಂಚ ಪಡೆದಿದ್ದ ಬಿಎಂಟಿಸಿಯ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದ ಬಿಎಂಟಿಸಿಯ ಡಿಪೋ ೨೭ ರ ಏಳು ಅಧಿಕಾರಿಗಳ ಖಾತೆಯಲ್ಲಿ ಲಕ್ಷಾಂತರ ರೂ. ಪತ್ತೆಯಾಗಿದೆ. ಒಬ್ಬೊಬ್ಬ ಅಧಿಕಾರಿಗಳ ಅಕೌಂಟ್‌ನಲ್ಲಿ ಸುಮಾರು ೨೦ ರಿಂದ ೨೫ ಲಕ್ಷ ರೂ. ಸಿಕ್ಕಿದೆ. ಒಟ್ಟು ಏಳು ಅಧಿಕಾರಿಗಳ ಖಾತೆಯಲ್ಲಿ ಸುಮಾರು ಒಂದೂವರೆ ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿದೆ. ಗೂಗಲ್ ಪೇ ಫೋನ್ ಪೇ ಮೂಲಕ ಹಣ ವಸೂಲಿ ಮಾಡುತ್ತಿದ್ದರು.
ಪ್ರತಿ ವಾರ ೫೦೦ ರೂ. ವಸೂಲಿ:
ಡ್ಯೂಟಿ, ವೀಕ್ಲಿ ಆಫ್ ರಜೆ ಹಾಗೂ ಕಂಡಿಷನ್ ಇರುವ ಮತ್ತು ಹೆಚ್ಚು ಕಲೆಕ್ಷನ್ ಬರುವ ಬಸ್ ನೀಡಲು ಡಿಪೋ ಮ್ಯಾನೇಜರ್ ಮತ್ತು ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕು. ಹಣ ನೀಡಿದರೆ ಎಲ್ಲಾ ವ್ಯವಸ್ಥೆ ಮಾಡುತ್ತಾರೆ. ಹಣ ನೀಡಿಲ್ಲ ಅಂದರೆ ಮಾನಸಿಕವಾಗಿ ಕಿರುಕುಳ ನೀಡುವುದು ಮಾಡುತ್ತಾರೆ.ಈ ಹಿನ್ನೆಲೆಯಲ್ಲಿ ಕಂಡಕ್ಟರ್ ಡ್ರೈವರ್‌ಗಳಿಂದ ಪ್ರತಿ ವಾರ ೫೦೦ ರೂಪಾಯಿ ಅಂತೆ ಪ್ರತಿ ತಿಂಗಳಿಗೆ ಎರಡು ಸಾವಿರ ರೂ. ವಸೂಲಿ ಮಾಡಲಾಗಿತ್ತು. ಈ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಸಾರಿಗೆ ಸಚಿವರು ಅಂದಿನ ಬಿಎಂಟಿಸಿ ಎಂ.ಡಿ ಜಿ. ಸತ್ಯವತಿ ಅವರಿಗೆ ತನಿಖೆ ಮಾಡಲು ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳು, ಏಳು ಅಧಿಕಾರಿಗಳ ಎಲ್ಲಾ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಪ್ರತಿಯೊಬ್ಬರ ಅಕೌಂಟ್‌ಗೆ ಡ್ರೈವರ್ ಕಂಡಕ್ಟರ್‌ಗಳಿಂದ ಲಕ್ಷಾಂತರ ರೂ. ಗೂಗಲ್ ಪೇ ಫೋನ್ ಪೇ ಮೂಲಕ ಹಾಕಿಸಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಏಳು ಅಧಿಕಾರಿಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಅಮಾನತ್ತುಗೊಂಡ ಅಧಿಕಾರಿಗಳು:
ಆರ್.ಮಂಜುಳಾ-ಸಿಬ್ಬಂದಿ ಮೇಲ್ವಿಚಾರಕಿ, ಪ್ರೀತಮ್-ಕಿರಿಯ ಸಹಾಯಕ, ಮನೋಜ್ ಕುಮಾರ್-ಕಿರಿಯ ಸಹಾಯಕ, ಧನಂಜಯ-ಸಹಾಯಕ ಲೆಕ್ಕಿಗ, ಸುಮ.ಎ-ಕಿರಿಯ ಸಹಾಯಕಿ ಶಾಂತವ್ವ-ಕಿರಿಯ ಸಹಾಯಕಿ, ದೇವರಾಜ್- ಸಹಾಯಕ ಕುಶಲಕರ್ಮಿ