ನವದೆಹಲಿ: ದೆಹಲಿಯ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸೋನಿಕಾ ಯಾದವ್, 7ನೇ ತಿಂಗಳ ಗರ್ಭಾವಸ್ಥೆಯಲ್ಲಿ (Weightlifting) ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 145 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದಿದ್ದಾರೆ.
ಆಂಧ್ರಪ್ರದೇಶದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ವೇಟ್‌ಲಿಫ್ಟಿಂಗ್ ಕ್ಲಸ್ಟರ್ 2025-26ರಲ್ಲಿ ಸೋನಿಯಾ ಯಾದವ್ 84+ ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಏಳು ತಿಂಗಳ ಗರ್ಭಿಣಿಯಾಗಿದ್ದರೂ, ಸೋನಿಯಾ ಯಾದವ್ ಈ ಸ್ಪರ್ಧೆಯಲ್ಲಿ 145 ಕೆಜಿ ಎತ್ತಿದರು. ಸೋನಿಕಾ ಯಾದವ್ ಮೇ 2025 ರಲ್ಲಿ ಗರ್ಭಿಣಿಯಾದರು. ತಮ್ಮ ಗರ್ಭಾವಸ್ಥೆಯಲ್ಲಿಯೂ ಸಹ ತಮ್ಮ ತರಬೇತಿಯನ್ನು ಮುಂದುವರಿಸಿದ್ದರು.
ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಸೋನಿಯಾ ಯಾದವ್ ಸ್ಕ್ವಾಟ್‌ಗಳಲ್ಲಿ 125 ಕೆಜಿ, ಬೆಂಚ್ ಪ್ರೆಸ್‌ನಲ್ಲಿ 80 ಕೆಜಿ ಮತ್ತು ಡೆಡ್‌ಲಿಫ್ಟ್‌ನಲ್ಲಿ 145 ಕೆಜಿ ಎತ್ತಿದರು. ಇದು ಸ್ಪರ್ಧೆಯಲ್ಲಿ ಅವರು ಎತ್ತಿದ ಒಟ್ಟು ತೂಕವನ್ನು 350 ಕೆಜಿಗೆ ಏರಿಸಿತು.
ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಸಮಯದಲ್ಲಿ ಸೋನಿಕಾ ಯಾದವ್ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದರಿಂದ ಅವರು ಗರ್ಭಿಣಿಯಾಗಿದ್ದಾರೆಂದು ಯಾರಿಗೂ ತಿಳಿದಿರಲಿಲ್ಲ. ಬೆಂಚ್ ಪ್ರೆಸ್ ನಂತರ, ಸೋನಿಕಾ ಯಾದವ್ ಅವರ ಪತಿ ಅವರು ಎದ್ದು ನಿಲ್ಲಲು ಸಹಾಯ ಮಾಡಿದರು. ಇದಾದ ನಂತರ, ಎಲ್ಲರಿಗೂ ಈ ವಿಷಯ ತಿಳಿಯಿತು ಮತ್ತು ಇಡೀ ಕ್ರೀಡಾಂಗಣವು ಚಪ್ಪಾಳೆ ತಟ್ಟಿ ಹುರಿದುಂಬಿಸಿತು.