ನ್ಯೂಸ್

ಅನಂತ್ ಅಂಬಾನಿ ವಿವಾಹ; ನಿಶ್ಚಿತಾರ್ಥದಿಂದ ಮದುವೆಯವರೆಗೆ ಸುಮಾರು 7 ತಿಂಗಳ ಕಾರ್ಯಕ್ರಮಗಳು…

ಮುಂಬೈ:  ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಜೊತೆ  ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮೆಗಾ ವೆಡ್ಡಿಂಗ್ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ. ಈ ವಿವಾಹ ಸಮಾರಂಭದಲ್ಲಿ ಬಾಲಿವುಡ್, ಹಾಲಿವುಡ್, ರಾಜಕೀಯ ಮತ್ತು ಕ್ರೀಡೆಯ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅನಂತ್-ರಾಧಿಕಾ ಮದುವೆ ಸಮಾರಂಭ ಸುಮಾರು 7 ತಿಂಗಳ ಕಾಲ ನಡೆಯಿತು. ನಿಶ್ಚಿತಾರ್ಥದಿಂದ ಮದುವೆಯವರೆಗೂ ಯಾವೆಲ್ಲ ಕಾರ್ಯಕ್ರಮಗಳು ನಡೆದಿವೆ ಎನ್ನುವ ಮಾಹಿತಿ ಇಲ್ಲಿದೆ...

29 ಡಿಸೆಂಬರ್ 2023ರಂದು ನಿಶ್ಚಿತಾರ್ಥ: ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಕಳೆದ ವರ್ಷ ಡಿಸೆಂಬರ್ 29 ರಂದು ರಾಜಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇಲ್ಲಿನ ನಾಥದ್ವಾರದಲ್ಲಿರುವ ಶ್ರೀನಾಥಜಿ ದೇವಸ್ಥಾನದಲ್ಲಿ ಸಮಾರಂಭ ನಡೆಯಿತು. ಈ ವೇಳೆ ಅಂಬಾನಿ ಕುಟುಂಬಸ್ಥರು, ಉದ್ಯಮಿ ಕುಟುಂಬಸ್ಥರು ಉಪಸ್ಥಿತರಿದ್ದರು.

18-19 ಜನವರಿ 2024ರಂದು ಮೆಹಂದಿ: ಈ ವರ್ಷದ ಆರಂಭದಲ್ಲಿ ರಾಧಿಕಾ ಅವರ ಮೆಹಂದಿ ಸಮಾರಂಭವು ಜನವರಿ 19, 2024 ರಂದು ನಡೆಯಿತು. ಸಾಂಪ್ರದಾಯಿಕ ಮೆಹಂದಿ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಭಾಗವಹಿಸಿದ್ದರು. ಮರುದಿನ  ನಿಶ್ಚಿತಾರ್ಥ ಸಮಾರಂಭವನ್ನು ನಡೆಸಿದರು. ಇದರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಂತಹ ಸೆಲೆಬ್ರಿಟಿಗಳು ಅವರಲ್ಲಿ ಉಪಸ್ಥಿತರಿದ್ದರು.