ಗೋಣಿಕೊಪ್ಪಲು : ಚೆಕ್ಕೇರ ಒಕ್ಕ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ 7 ಪುರುಷ ಮತ್ತು 3 ಮಹಿಳಾ ತಂಡಗಳು ಮುನ್ನಡೆ ಪಡೆದುಕೊಂಡಿವೆ.
ಉಳುವಂಗಡ ಮತ್ತು ಬೊಟ್ಟಂಗಡ ತಂಡಗಳ ನಡುವೆ ಮಂಗಳವಾರ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಟ್ಟಂಗಡ ತಂಡ ನಿಗದಿತ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಉಳುವಂಗಡ ತಂಡ 3 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು. ಓಡಿಯಂಡ ಮತ್ತು ಕೊಟ್ಟಂಗಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಟ್ಟಂಗಡ ತಂಡ ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತು. ಓಡಿಯಂಡ ತಂಡ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಕೋಳುಮಾಡಂಡ ಮತ್ತು ಅಮ್ಮಾಟಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕೋಳುಮಾಡಂಡ ತಂಡ ನಿಗದಿತ 6 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು. ಅಮ್ಮಾಟಂಡ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಅಣ್ಣಳಮಾಡ ಮತ್ತು ಕರೋಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಣ್ಣಳಮಾಡ ತಂಡ ನಿಗದಿತ 6 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು. ಕರೋಟಿರ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ನಂದೀರ ಮತ್ತು ಅಳಮೇಂಗಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ನಂದೀರ ತಂಡ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು. ಅಳಮೇಂಗಡ ತಂಡ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಚೆಕ್ಕೇರ ಮತ್ತು ಮುಕ್ಕಾಟಿರ (ಕುಂಬಳದಾಳು) ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೆಕ್ಕೇರ ತಂಡ ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿತು. ಮುಕ್ಕಾಟಿರ ತಂಡ 7 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು.
ನೆರವಂಡ ಮತ್ತು ಬಳ್ಳಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ನೆರವಂಡ ತಂಡ ನಿಗದಿತ 6 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತು. ಬಳ್ಳಂಡ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 25 ರನ್ ಗಳಿಸಲಷ್ಟೇ ಶಕ್ತವಾಯ್ತು.
ಮಹಿಳಾ ಪಂದ್ಯಾವಳಿ: ಮುಕ್ಕಾಟಿರ ಮತ್ತು ಕಾಣತಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮುಕ್ಕಾಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತು. ಕಾಣತಂಡ ತಂಡ 4 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿ ಸೋಲನ್ನಪ್ಪಿತು. ಅಜ್ಜಿಕುಟ್ಟೀರ ಮತ್ತು ಓಡಿಯಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಜ್ಜಿಕುಟ್ಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತು. ಓಡಿಯಂಡ ತಂಡ ವಿಕೆಟ್ ನಷ್ಟವಿಲ್ಲದೆ 1.3 ಓವರ್‌ಗಳಲ್ಲಿ ಗುರಿ ತಲುಪಿತು.
ಮಣವಟ್ಟಿರ ಮತ್ತು ಚೊಟ್ಟೆಯಂಡಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಣವಟ್ಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿತು. ಚೊಟ್ಟೆಯಂಡಮಾಡ ತಂಡ 5 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಲಷ್ಟೇ ಶಕ್ತವಾಯ್ತು.
ಇಂದಿನ ಪುರುಷರ ಪಂದ್ಯಗಳು
9 ಗಂಟೆಗೆ ಬೊಳ್ಳಂದಂಡ-ಮಚ್ಚಮಡ
10 ಗಂಟೆಗೆ ಅಚ್ಚಪಂಡ-ಕಾಳಿಮಡ
12 ಗಂಟೆಗೆ ಮಂಡಂಗಡ-ಸಣ್ಣುವಂಡ
1 ಗಂಟೆಗೆ ಮಾಳೆಟಿರ (ಕೆದ ಮುಳ್ಳೂರು)-ಮುಕೊಳೆರ
2 ಗಂಟೆಗೆ ಆಟ್ರಂಗಡ-ಚಿರಿಯಪಂಡ
3 ಗಂಟೆಗೆ ಪಂದ್ಯಂಡ -ಅಲ್ಲಂಗಡ