ಕಾಬುಲ್: ಕಾಬುಲ್ ವಿಮಾನ ನಿಲ್ದಾಣದಲ್ಲಿ ನಡೆದ ಸಂಘರ್ಷದಲ್ಲಿ ಆಫ್ಘಾನ್ನ 7 ನಾಗರಿಕರನ್ನು ಹತ್ಯೆ ಮಾಡಲಾಗಿದೆ. ತಾಲಿಬಾನಿಗಳು ಆಫ್ಘಾನ್ ಆಕ್ರಮಿಸಿಕೊಂಡ ಬಳಿಕ ದೇಶ ಬಿಟ್ಟು ಹೋಗಲು ಅಲ್ಲಿನ ನಾಗರಿಕರು ಕಾಬುಲ್ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದು, ಈ ವೇಳೆ ಉಂಟಾದ ಸಂಘರ್ಷದಲ್ಲಿ ನಾಗರಿಕರ ಹತ್ಯೆಯಾಗಿದೆ.
ಹತ್ಯೆಯಾಗಿರುವ ಮಾಹಿತಿಯನ್ನು ಬ್ರಿಟಿಷ್ ಮಿಲಿಟರಿ ಖಚಿತಪಡಿಸಿದೆ. ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಆಫ್ಘಾನ್ ನೆಲ ತುಂಬಾ ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ. ಆದರೆ, ನಾವು ಎಲ್ಲವನ್ನು ನಿರ್ವಹಿಸುವ ಮತ್ತು ಜನಗಳ ಸುರಕ್ಷತೆಗೆ ಸಾಧ್ಯವಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಬ್ರಿಟಿಷ್ ಮಿಲಿಟರಿ ಹೇಳಿದೆ.
ಸಾವಿರಾರು ಆಫ್ಘಾನ್ ಮಂದಿ ದೇಶ ತೊರೆಯಲು ತುದಿಗಾಲಲ್ಲಿ ನಿಂತಿರುವುದರಿಂದ ಅಲ್ಲಿನ ಪರಿಸ್ಥಿತಿ ತುಂಬಾ ವಿಷಮವಾಗಿದೆ. ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ವಾರಗಳು ಕಳೆದಿದ್ದು, ಈಗಾಗಲೇ ಸಾಕಷ್ಟು ನಾಗರಿಕರು ತಾಲಿಬಾನಿಗಳ ಅಟ್ಟಹಾಸನಕ್ಕೆ ನಲುಗಿದ್ದಾರೆ. (ಏಜೆನ್ಸೀಸ್)